ಕೆಜಿಎಫ್ ಚಿತ್ರದಲ್ಲಿ ಆ್ಯಂಡ್ರೂಸ್ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನಟ ಅವಿನಾಶ್ ಅವರ ಕಾರು ಅಪಘಾತಕ್ಕೀಡಾಗಿದೆ. ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಅವಿನಾಶ್ ಅವರಿದ್ದ ಕಾರಿಗೆ ದೊಡ್ಡ ಕಂಟೇನರ್ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಅವಿನಾಶ್ ಅವರ ಬೆಂಜ್ ಕಾರು ನಜ್ಜುಗುಜ್ಜಾಗಿ ಹೋಗಿದೆ. ಕಂಟೇನರ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಂಟೇನರ್ ಚಾಲಕ ಶಿವನಗೌಡನನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವಿನಾಶ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚೇತರಿಸಿಕೊಂಡಿದ್ದಾರೆ.