` ಬೈರಾಗಿಯಲ್ಲಿ ಮೂರು ಹೀರೋಗಳು.. ಮೂವರು ಹೀರೋಯಿನ್ಸ್. ಆದರೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬೈರಾಗಿಯಲ್ಲಿ ಮೂರು ಹೀರೋಗಳು.. ಮೂವರು ಹೀರೋಯಿನ್ಸ್. ಆದರೆ..
Bairagi Movie Image

ಬೈರಾಗಿ. ಇದೇ ವಾರ ರಿಲೀಸ್ ಆಗುತ್ತಿರುವ ಶಿವಣ್ಣ ನಟಿಸಿರೋ 123ನೇ ಸಿನಿಮಾ. ವಿಜಯ್ ಮಿಲ್ಟನ್ ನಿರ್ದೇಶನದ ಈ ಚಿತ್ರದಲ್ಲಿ ಮೂವರು ಹೀರೋಗಳಿದ್ದಾರೆ. ಶಿವಣ್ಣ. ಡಾಲಿ ಧನಂಜಯ್ ಮತ್ತು ಪೃಥ್ವಿ ಅಂಬರ್. ಇವರ ಜೊತೆಗೆ ಶಶಿಕುಮಾರ್, ಚಿಕ್ಕಣ್ಣ.. ಹೀಗೆ ಬೃಹತ್ ತಾರಾಗಣವೇ ಇದೆ. ಇವರೆಲ್ಲರ ಜೊತೆ ಮೂವರು ನಾಯಕಿಯರು.

ಅಂಜಲಿ : ಈ ಮೊದಲು ಪುನೀತ್ ರಾಜಕುಮಾರ್ ಅವರ ರಣವಿಕ್ರಮದಲ್ಲಿ ನಟಿಸಿದ್ದವರು.

ಯಶಾ ಶಿವಕುಮಾರ್ : ತುಳು ಚಿತ್ರರಂಗದ ಕ್ರಷ್ ಆಗಿರೋ ಯಶಾ ಅವರಿಗೆ ಕನ್ನಡದಲ್ಲಿದು ಮೊದಲ ಸಿನಿಮಾ. ಕನ್ನಡದಲ್ಲಿ ಆಗಲೇ ಮೂರ್ನಾಲ್ಕು ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿರುವ ಯಶಾ ಅವರಿಗೆ ತೆಲುಗಿನಲ್ಲೂ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಸಪ್ತಾ ಪವೂರ್ : ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರದಲ್ಲಿ ನಟಿಸಿದ್ದ ಹುಡುಗಿ. ಪ್ರವೀಣನ ಕ್ರಷ್ಷು.

ಇವರಲ್ಲದೆ ರಂಗಭೂಮಿ ಪ್ರತಿಭೆ ಕಲ್ಪನಾ ನಾಗನಾಥ್ ಕೂಡಾ ನಟಿಸಿದ್ದಾರೆ.

ಹೀರೋಗಳಷ್ಟೇ ಅಲ್ಲ, ನಾಯಕಿಯರಿಗೆ ಕೂಡಾ ಅತ್ಯುತ್ತಮ ರೋಲ್ ಇದೆ. ಸ್ಪೇಸ್ ಇದೆ. ಇಡೀ ಚಿತ್ರದ ಕಥೆ ಈ ನಾಲ್ವರು ಮಹಿಳಾ ಪಾತ್ರಧಾರಿಗಳ ಪಾತ್ರಗಳ ಸುತ್ತಲೇ ಇದೆ ಎಂದಿದ್ದಾರೆ ಡೈರೆಕ್ಟರ್ ವಿಜಯ್ ಮಿಲ್ಟನ್. ಕೃಷ್ಣ ಸಾರ್ಥಕ್ ನಿರ್ಮಾಣದ ಬೈರಾಗಿ ಸಖತ್ ಸೌಂಡ್ ಮಾಡುತ್ತಿದ್ದು, ಈ ಶುಕ್ರವಾರ ಶಿವಣ್ಣನ ಹಬ್ಬ ಫಿಕ್ಸ್.