` ಹರಿಕಥೆ ಅಲ್ಲ ಗಿರಿಕಥೆ : ಅಮೆರಿಕದಲ್ಲಿ ರಿಲೀಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹರಿಕಥೆ ಅಲ್ಲ ಗಿರಿಕಥೆ : ಅಮೆರಿಕದಲ್ಲಿ ರಿಲೀಸ್
Harikathe Alla Girikathe Movie Image

ಕಳೆದ ವಾರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರೋ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆ. ರಿಷಬ್ ಶೆಟ್ಟಿ ಹೀರೋ ಆಗಿರೋ ಚಿತ್ರ.. ಪ್ರೇಕ್ಷಕರನ್ನು ನಕ್ಕು ನಲಿಸುತ್ತಿದೆ. ಸಿನಿಮಾ ಡೈರೆಕ್ಟರ್ ಒಬ್ಬರ ಕಥೆಯನ್ನೇ ವಿಭಿನ್ನವಾಗಿ ಹೇಳಿರುವ ಸಿನಿಮಾ ಹರಿಕಥೆ ಅಲ್ಲ ಗಿರಿಕಥೆ. ಈಗ ಅಮೆರಿಕದಲ್ಲಿ ರಿಲೀಸ್ ಆಗುತ್ತಿದೆ.

ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಅಟ್ಲಾಂಟಾ ಸೇರಿದಂತೆ ಹಲವೆಡೆ ಹರಿಕಥೆ ಅಲ್ಲ ಗಿರಿಕಥೆ ರಿಲೀಸ್ ಮಾಡಲಾಗುತ್ತಿದೆ.

ರಿಷಬ್ ಶೆಟ್ಟಿ ಎದುರು ರಚನಾ ಇಂದರ್, ತಪಸ್ವಿನಿ ಪೂಣಚ್ಚ ನಾಯಕಿಯರಾಗಿ ನಟಿಸಿದ್ದರೆ, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಚಿತ್ರದ ಇನ್ನಿತರ ಪ್ರಮುಖ ಪಾತ್ರದಲ್ಲಿದ್ದಾರೆ. ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ನಿರ್ದೇಶನ ಮಾಡಿರುವ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು.