` ಹಿಂದೂಗಳ ಜೀವ ಮುಖ್ಯ ಅಭಿಯಾನಕ್ಕೆ ಧುಮುಕಿದ ಪ್ರಣೀತಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಹಿಂದೂಗಳ ಜೀವ ಮುಖ್ಯ ಅಭಿಯಾನಕ್ಕೆ ಧುಮುಕಿದ ಪ್ರಣೀತಾ
Pranitha Subash Image

ರಾಜಸ್ತಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಎಂಬ ಟೈಲರ್ ಕಗ್ಗೊಲೆ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. ಅಂಗಡಿಗೆ ನುಗ್ಗಿದ ಇಬ್ಬರು ಮುಸ್ಲಿಮ್ ಯುವಕರು ಕನ್ಹಯ್ಯ ಲಾಲ್ ತಲೆ ಕತ್ತರಿಸಿ ಹಾಕಿ, ವಿಡಿಯೋ ಮಾಡಿದ್ದು, ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕಿದ್ದು ಈಗ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ನಡೆದ ವಿವಾದಗಳಿಂದಾಗಿ ಈಗ ಆತಂಕಕ್ಕೆ ಸಿಲುಕಿರೋದು ಹಿಂದೂಗಳೇ.

ಸಾಮಾನ್ಯವಾಗಿ ಹಿಂದೂಗಳ ಮೇಲೆ ವಿವಿಧ ಕಾರಣ, ನೆಪ ಹೇಳಿ ಅಭಿಯಾನ ಮಾಡಲಾಗುತ್ತಿತ್ತು. ಈಗ ಜೀವ ಭಯಕ್ಕೆ ಸಿಲುಕಿರೋ ಹಿಂದೂಗಳ ಸರದಿ. ಹಿಂದೂ ಲೈಫ್ಸ್ ಮ್ಯಾಟರ್ ಎಂದ್ರೆ ಹಿಂದೂಗಳ ಜೀವ ಮುಖ್ಯ ಅನ್ನೋ ಅಭಿಯಾನ ಶುರುವಾಗಿದೆ.

ಹಿಂದೂ ವಿಷಯ ಬಂದಾಗ ಮುನ್ನೆಲೆಯಲ್ಲಿರೋ ನಟಿ ಪ್ರಣೀತಾ ಸುಭಾಷ್, ಅಪೂರ್ವ ಸಿಂಗ್ ಸೇರಿದಂತೆ ಹಲವರು ಪ್ಲೆಕಾರ್ಡ್ ಹಿಡಿದುಕೊಂಡು ಧ್ವನಿಯೆತ್ತಿದ್ದಾರೆ. ಹಿಂದುತ್ವದ ವಿಷಯ ಬಂದಾಗಲೆಲ್ಲ ಮುನ್ನೆಲೆಗೆ ಬರುವ ಪ್ರಣೀತಾ ಇತ್ತೀಚೆಗೆ ಅಫ್ಘಾನಿಸ್ಥಾನದ ವಿಷಯಕ್ಕೆ ಸಂಬಂಧಪಟ್ಟಂತೆ ಹಿಂದೂ ಭಯೋತ್ಪಾದನೆ ಪದ ಬಳಸಿದಾಗ ಕಿಡಿ ಕಾರಿದ್ದರು.