ಕೊರೊನಾ ಬಂದ ನಂತರ ಹಲವು ಸ್ಟಾರ್ ನಟರು ತಮ್ಮ ತಮ್ಮ ಹುಟ್ಟುಹಬ್ಬ ಆಚರಣೆ ಬಿಟ್ಟಿದ್ದಾರೆ. ಹೆಚ್ಚೂ ಕಡಿಮೆ 3 ವರ್ಷಗಳಾಗುತ್ತಿವೆ. ಇದರ ಮಧ್ಯೆ ಬ್ಯುಸಿ ಶೆಡ್ಯೂಲ್ಗಳೂ ಹುಟ್ಟುಹಬ್ಬ ಆಚರಣೆಯನ್ನು ದೂರ ಇಡುತ್ತಿವೆ. ಗೋಲ್ಡನ್ ಸ್ಟಾರ್ ಗಣೇಶ್ ಇದಕ್ಕಾಗಿಯೇ ಈ ಬಾರಿಯೂ ಅಭಿಮಾನಿಗಳ ಕ್ಷಮೆ ಕೇಳಿದ್ದಾರೆ.
ಜುಲೈ 2ಕ್ಕೆ ಗಣೇಶ್ ಹುಟ್ಟುಹಬ್ಬವಿದೆ. ಆ ದಿನ ನಾನು ಮನೆಯಲ್ಲಿ ಇರೋದಿಲ್ಲ. ದಯವಿಟ್ಟು ಕ್ಷಮಿಸಿ. ನಿಮ್ಮ ಹಾರೈಕೆ ಇರಲಿ. ನನಗಾಗಿ ಆ ದಿನ ತರುವ ಹಾರ, ತುರಾಯಿ, ಸಿಹಿಗಳನ್ನು ಅಗತ್ಯ ಇರುವವರಿಗೆ ತಲುಪಿಸಿ ಎಂದು ಮನವಿ ಮಾಡಿದ್ದಾರೆ ಗಣೇಶ್.