` ದಿಗಂತ್`ಗೆ ದೇವರಾಗಿ ಬಂದವರಿಗೆ ಐಂದ್ರಿತಾ ಧನ್ಯವಾದ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ದಿಗಂತ್`ಗೆ ದೇವರಾಗಿ ಬಂದವರಿಗೆ ಐಂದ್ರಿತಾ ಧನ್ಯವಾದ
ದಿಗಂತ್`ಗೆ ದೇವರಾಗಿ ಬಂದವರಿಗೆ ಐಂದ್ರಿತಾ ಧನ್ಯವಾದ

ಇತ್ತೀಚೆಗೆ ಇಡೀ ರಾಜ್ಯದಲ್ಲಿ ಆತಂಕ ಮೂಡಿಸಿದ್ದ ಘಟನೆ ದಿಗಂತ್ ಅವರಿಗೆ ಸಂಭವಿಸಿದ ಆಕಸ್ಮಿಕ ಅಪಘಾತ. ಬ್ಯಾಕ್ ಫ್ಲಿಪ್ ಮಾಡುವಾಗ ಎಡವಟ್ಟಾಗಿ ಕುತ್ತಿಗೆ ಮೂಳೆಗೇ ಪೆಟ್ಟು ಮಾಡಿಕೊಂಡಿದ್ದರು ದಿಗಂತ್. ಗೋವಾದಲ್ಲಿ ಅನಾಹುತ ಮಾಡಿಕೊಂಡಿದ್ದ ದಿಗಂತ್ ಅವರನ್ನು ಗುಣಮುಖರನ್ನಾಗಿ ಕಳಿಸಿದ್ದ ಮಣಿಪಾಲ್ ಆಸ್ಪತ್ರೆ. ದಿಗಂತ್ ಅವರನ್ನು ಗೋವಾದಿಂದ ಏರ್‍ಲಿಫ್ಟ್ ಮಾಡಲಾಗಿತ್ತು. ಆ ಕ್ಷಣದಲ್ಲಿ ದಿಗಂತ್ ಅವರ ಕಷ್ಟಕ್ಕೆ ನೆರವಾಗಿದ್ದು ವೆಂಕಟ್ ನಾರಾಯಣ್.

ಪ್ರೆಸ್ಟೀಜ್ ಗ್ರೂಪ್ ಸಿಇಒ ಹಾಗೂ ಚಿತ್ರ ನಿರ್ಮಾಪಕರೂ ಆಗಿರುವ ವೆಂಕಟ್ ನಾರಾಯಣ್. ಏನು ಮಾಡಬೇಕು ಎನ್ನುವುದೇ ಗೊತ್ತಾಗದೇ ನಿಂತಿದ್ದ ಸಂದರ್ಭದಲ್ಲಿ ದೇವರಂತೆ ಬಂತು ಸಹಾಯ ಮಾಡಿದವರು ಇವರೇ. ಅವರನ್ನು ದೇವರೇ ಕಳಿಸಿರಬೇಕು ಎಂದು ವೆಂಕಟ್ ನಾರಾಯಣ್ ಅವರಿಗೆ ಧನ್ಯವಾದ ಹೇಳಿದ್ದಾರೆ ಐಂದ್ರಿತಾ ದಿಗಂತ್ ರೇ.

ಅಂದಹಾಗೆ ಈ ವೆಂಕಟ್ ನಾರಾಯಣ್ ಬೈ ಟು ಲವ್, ಸಖತ್ ಚಿತ್ರಗಳನ್ನು ನಿರ್ಮಿಸಿದ್ದವರು. ಪ್ರತಿಷ್ಟಿತ ವಿತರಕರೂ ಆಗಿರುವ ವೆಂಕಟ್ ನಾರಾಯಣ್ ಪೊಗರು, ಆರ್.ಆರ್.ಆರ್. ಚಿತ್ರಗಳನ್ನು ವಿತರಣೆ ಮಾಡಿದ್ದವರು. ಕನ್ನಡದ ಹಲವು ಚಿತ್ರಗಳಿಗೆ ಫಂಡಿಂಗ್ ಮಾಡಿರುವ ವ್ಯಕ್ತಿ.