` ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ನಟಿ ಮೀನಾ ಪತಿ ವಿದ್ಯಾಸಾಗರ್ ನಿಧನ
Actress Meen with Husband Vidya Sagar and Daughter

ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ಮೃತಪಟ್ಟಿದ್ದಾರೆ. ಕೆಲವು ವರ್ಷಗಳಿಂದ ವಿದ್ಯಾಸಾಗರ್ ಶ್ವಾಸಕೋಶ ಸಂಬಂಧಿ ಸೋಂಕಿನಿಂದ ಬಳಲುತ್ತಿದ್ದರು. ಕೊರೊನಾ ವೇಳೆಯಲ್ಲೂ ಶ್ವಾಸಕೋಶದ ಸೋಂಕಿದ್ದರೂ ಬಚಾವ್ ಆಗಿದ್ದರು. ಶ್ವಾಸಕೋಶದ ಕಸಿ ಮಾಡಿಸಿಕೊಳ್ಳುವಂತೆ ವೈದ್ಯರು ಸಲಹೆ ಕೊಟ್ಟಿದ್ದರು. ಆದರೆ ದಾನಿಗಳು ಸಿಗದೆ ಸಾಧ್ಯವಾಗಿರಲಿಲ್ಲ. ಶ್ವಾಸಕೋಶದ ಸೋಂಕು ತೀವ್ರಗೊಂಡು ವಿದ್ಯಾಸಾಗರ್ ಮೃತಪಟ್ಟಿದ್ದಾರೆ.

ಮೀನಾ ಮತ್ತು ವಿದ್ಯಾಸಾಗರ್ 2009ರಲ್ಲಿ ಮದುವೆಯಾಗಿದ್ದರು. ವಿದ್ಯಾಸಾಗರ್ ಮೂಲತಃ ಬೆಂಗಳೂರಿನವರು, ಸಾಫ್ಟ್‍ವೇರ್ ಎಂಜಿನಿಯರ್ ಆಗಿದ್ದರು. ಕುಟುಂಬ ಚೆನ್ನೈನಲ್ಲೇ ನೆಲೆಸಿತ್ತು. ಮೀನಾ-ವಿದ್ಯಾಸಾಗರ್ ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ.