ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ರಿಲೀಸ್ ಆಗುವುದು ಜುಲೈ ಅಂತ್ಯದಲ್ಲಿ. ಹವಾ ಮಾತ್ರ.. ತಿಂಗಳಿಗೂ ಮೊದಲೇ ಭರ್ಜರಿಯಾಗಿದೆ. ಎಲ್ಲೆಲ್ಲೂ ರಕ್ಕಮ್ಮ..ರಕ್ಕಮ್ಮ ಎನ್ನುತ್ತಿದ್ದಾರೆ ಫ್ಯಾನ್ಸ್. ಇದರ ಮಧ್ಯೆ ಬಡಾ ಬಚ್ಚನ್ ಮತ್ತು ಬಡಾ ಕ್ಯಾಪ್ಟನ್ ಇಬ್ಬರೂ ಕಿಚ್ಚನನ್ನು ಮೆಚ್ಚಿದ್ದಾರೆ.
ಬಡಾ ಬಚ್ಚನ್ ಅಂದ್ರೆ ಅಮಿತಾಭ್. ಈ ಮೊದಲು ಅಮಿತಾಭ್ ಜೊತೆ ಸುದೀಪ್ ನಟಿಸಿದ್ದರು ಕೂಡಾ. ಈಗ ಸುದೀಪ್ ಅವರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ತಾವು ನಟಿಸದ ಚಿತ್ರಗಳನ್ನು ಅಮಿತಾಭ್ ಟ್ವೀಟ್ ಮಾಡೋದು ಬಹಳ ಅಪರೂಪ. ಅಂಥಾದ್ದರಲ್ಲಿ ಕನ್ನಡದ ಬಚ್ಚನ್ ಎನಿಸಿಕೊಂಡಿರೋ ಸುದೀಪ್ ಚಿತ್ರಕ್ಕೆ ಬಡಾ ಬಚ್ಚನ್ ಹೊಗಳಿಕೆ ಸಿಕ್ಕಿದೆ.
ಇನ್ನು ಬಡಾ ಕ್ಯಾಪ್ಟನ್. ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಹೀರೋ ಕಪಿಲ್ ದೇವ್. ವಿಕ್ರಾಂತ್ ರೋಣ ರಿಲೀಸ್ ಆಗುತ್ತಿರೋ ಈ ಶುಭ ಸಮಯದಲ್ಲಿ ಸುದೀಪ್ ಅವರಿಗೆ ತಮ್ಮ ಒಂದು ಬ್ಯಾಟ್‍ನ್ನು ಉಡುಗೊರೆ ಕೊಟ್ಟಿದ್ದಾರೆ. ಆ ಬ್ಯಾಟ್ ಅಂತಿಂತಾ ಬ್ಯಾಟ್ ಅಲ್ಲ. ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ 175 ಸಿಡಿಸಿ, ಏಕಾಂಗಿಯಾಗಿ ಪಂದ್ಯ ಗೆಲ್ಲಿಸಿದ್ದ ಸಂದರ್ಭದಲ್ಲಿ ಜೊತೆಗಿದ್ದ ಬ್ಯಾಟ್. ಅಂತಾದ್ದೊಂದು ಅಪರೂಪದ ಬ್ಯಾಟ್‍ನ್ನು ಕಿಚ್ಚನಿಗೆ ಉಡುಗೊರೆ ನೀಡಿ ಶುಭ ಕೋರಿದ್ದಾರೆ ಕಪಿಲ್. ಆ ಬ್ಯಾಟ್ ಮೇಲೆ ಟೀಂ ಇಂಡಿಯಾದ ಕಪಿಲ್ ಡೆವಿಲ್ಸ್‍ನ ಎಲ್ಲ ಆಟಗಾರರ ಸಹಿಯೂ ಇದೆ.