` ಕೆಜಿಎಫ್ ತಾತ ಹೀರೋ ಆದ್ರಲ್ಲ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕೆಜಿಎಫ್ ತಾತ ಹೀರೋ ಆದ್ರಲ್ಲ..
ಕೆಜಿಎಫ್ ತಾತ ಹೀರೋ ಆದ್ರಲ್ಲ..

ಕೆಜಿಎಫ್ ಚಾಪ್ಟರ್ 1ನಲ್ಲಿ ರಾಕಿ ಭಾಯ್ ಅವತಾರ ಚೇಂಜ್ ಆಗುವುದೇ ಈ ತಾತನಿಗಾಗಿ.. ಈ ತಾತನನ್ನು ಕೊಲ್ಲಲು ಹೊರಟಾಗಲೇ ರಾಕಿಭಾಯ್ ಒಳಗಿದ್ದ ಕಿಡಿ ಬೆಂಕಿಯಾಗುವುದು. ಆ ತಾತನ ಕ್ಯಾರೆಕ್ಟರ್ ಕೆಜಿಎಫ್ 2ನಲ್ಲೂ ಕಂಟಿನ್ಯೂ ಆಗಿತ್ತು. ಅವನ್ ತಂಟೆಗ್ ಹೋಗ್ಬೇಡಿ ಸರ್ ಅನ್ನೋ ಡೈಲಾಗ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈಗ ಆ ತಾತ ಹೀರೋ ಆಗುತ್ತಿದ್ದಾರೆ.

ಅಂದ್ಹಾಗೆ ಈ ತಾತನ ಪಾತ್ರ ಮಾಡಿರುವವರ ಹೆಸರು ಕೃಷ್ಣ ಜಿ.ರಾವ್. ಇವರು ಹೀರೋ ಆಗಿರೋ ಸಿನಿಮಾ ಹೆಸರು ನ್ಯಾನೋ ನಾರಾಯಣಪ್ಪ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮಾಡಿದ್ದ ಕುಮಾರ್ ಅವರ ಹೊಸ ಸಿನಿಮಾ ನ್ಯಾನೋ ನಾರಾಯಣಪ್ಪ. ಈ ಚಿತ್ರಕ್ಕೆ ಕುಮಾರ್ ನಿರ್ದೇಶಕರಷ್ಟೇ ಅಲ್ಲ, ನಿರ್ಮಾಪಕರೂ ಹೌದು.