` ಭಾಗ್ಯವಂತರು : ಹೊಸ ಟೆಕ್ನಾಲಜಿಯಲ್ಲಿ ಮತ್ತೊಮ್ಮೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಭಾಗ್ಯವಂತರು : ಹೊಸ ಟೆಕ್ನಾಲಜಿಯಲ್ಲಿ ಮತ್ತೊಮ್ಮೆ..
Bhagyavantharu Movie Image

ಭಾಗ್ಯವಂತರು. ಡಾ.ರಾಜ್, ಬಿ.ಸರೋಜಾದೇವಿ ಪ್ರಧಾನ ಪಾತ್ರದಲ್ಲಿದ್ದ 1977ರಲ್ಲಿ ರಿಲೀಸ್ ಆಗಿದ್ದ ಸಿನಿಮಾ. ದ್ವಾರಕೀಶ್ ನಿರ್ಮಾಣದ ಚಿತ್ರ ರಾಜ್ ಅವರ ಕ್ಲಾಸ್ ಸಿನಿಮಾಗಳಲ್ಲಿ ಒಂದು. ಭಾಗ್ಯವಂತರು ನಾವೇ ಭಾಗ್ಯವಂತರು, ನಿನ್ನ ನನ್ನ ಮನವು ಸೇರಿತು.. ನನ್ನ ನಿನ್ನ ಹೃದಯ ಹಾಡಿತು.. ಹಾಗೂ ನಿನ್ನಾ ಸ್ನೇಹಕೆ ನಾ ಸೋತು ಹೋದೆನು.. ಹಾಡುಗಳು ಇವತ್ತಿಗೂ ಗುನುಗುವಂತಿವೆ. ಆ ಚಿತ್ರ ಈಗ ಮತ್ತೆ ರಿಲೀಸ್ ಆಗುತ್ತಿದೆ.

ಮುನಿರಾಜು. ಭಾಗ್ಯವಂತರು ಚಿತ್ರವನ್ನು ಮತ್ತೊಮ್ಮೆ ಹೊಸದಾಗಿ ರಿಲೀಸ್ ಮಾಡಲು ಹೊರಟಿರುವ ಸಾಹಸಿ. ಡಾ.ರಾಜ್ ಅವರ ಅಪ್ಪಟ ಅಭಿಮಾನಿ. ಈ ಹಿಂದೆ ಆಪರೇಷನ್ ಡೈಮಂಡ್ ರಾಕೆಟ್, ನಾನೊಬ್ಬ ಕಳ್ಳ, ದಾರಿ ತಪ್ಪಿದ ಮಗ ಚಿತ್ರಗಳನ್ನು ಹೊಸ ಟೆಕ್ನಾಲಜಿಯಲ್ಲಿ ರಿಲೀಸ್ ಮಾಡಿದ್ದವರು.

45 ವರ್ಷಗಳ ನಂತರ ಭಾಗ್ಯವಂತರು ಸಿನಿಮಾ ರಿ-ರಿಲೀಸ್ ಆಗುತ್ತಿದೆ.7.1 ಡಿಜಿಟಲ್ ಸೌಂಡ್, ಕಲರಿಂಗ್ ಹಾಗೂ ಡಿಟಿಎಸ್ ಎಫೆಕ್ಟ್ ಕೊಟ್ಟು ಸಿನಿಮಾವನ್ನು ಸಿದ್ಧ ಮಾಡಿಸಿದ್ದಾರೆ ಮುನಿರಾಜು. ಸಿನಿಮಾ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಜುಲೈ 8ರಂದು.