` ಬಾಲಿವುಡ್`ಗೆ ಹರಿಸಂತೋಷ್ : ಥ್ಯಾಂಕ್ಸ್ ಹೇಳಿದ್ದ ಆ ಇಬ್ಬರಿಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಾಲಿವುಡ್`ಗೆ ಹರಿಸಂತೋಷ್ : ಥ್ಯಾಂಕ್ಸ್ ಹೇಳಿದ್ದ ಆ ಇಬ್ಬರಿಗೆ..
Hari santhosh Image

ಅಲೆಮಾರಿ, ಕಾಲೇಜ್ ಕುಮಾರ, ಬೈ ಟು ಲವ್.. ಹೀಗೆ ಒಂದರ ಹಿಂದೊಂದು ಹಿಟ್ ಕೊಟ್ಟ ನಿರ್ದೇಶಕ ಹರಿಸಂತೋಷ್ ಈಗ ಬಾಲಿವುಡ್ಡಿಗೆ ಹೊರಟು ನಿಂತಿದ್ದಾರೆ. ಹರಿ ಸಂತೋಷ್ ಅವರು ನಿರ್ದೇಶಿಸುತ್ತಿರೋ ಮೊದಲ ಸಿನಿಮಾ ಪಪ್ಪಿ ಲವ್. ತನುಜ್ ವಿರ್ವಾನಿ, ತ್ರಿಧಾ ಚೌಧರಿ, ಸಪ್ನಾ ಪಬ್ಬಿ ನಟಿಸುತ್ತಿರೋ ಸಿನಿಮಾ ಪಪ್ಪಿ ಲವ್.

ಎಲ್ಲದಕ್ಕೂ ಕಾರಣ ರಾಜಮೌಳಿ ಮತ್ತು ಪ್ರಶಾಂತ್ ನೀಲ್. ಅವರ ಆರ್.ಆರ್.ಆರ್. ಮತ್ತು ಕೆಜಿಎಫ್ ಗೆದ್ದ ನಂತರ ನಮಗೆಲ್ಲ ಬಾಲಿವುಡ್ ಬಾಗಿಲು ತೆರೆಯುತ್ತಿದೆ. ಮೊದಲೆಲ್ಲ ಅಲ್ಲಿನವರು ದಕ್ಷಿಣದ ಕಥೆಗಳನ್ನು ರೀಮೇಕ್ ಮಾಡುತ್ತಿದ್ದರೇ ಹೊರತು, ಹೊಸ ಕಥೆಗೆ ಓಪನ್ ಆಗುತ್ತಿರಲಿಲ್ಲ. ಮೊದಲು ನನಗೆ ನನ್ನದೇ ಕಾಲೇಜ್ ಕುಮಾರ ಚಿತ್ರವನ್ನ ಹಿಂದಿಗೆ ರೀಮೇಕ್ ಮಾಡಿ ಅನ್ನೋ ಆಫರ್ ಬಂತು. ಆಗ ನನ್ನ ಬಳಿ ಇದ್ದ ಹೊಸ ಕಥೆಗಳಿಗೆ ಅಲ್ಲಿನವರು ಇಂಟ್ರೆಸ್ಟ್ ಕೊಟ್ಟಿರಲಿಲ್ಲ ಎಂದಿದ್ದಾರೆ ಹರಿ ಸಂತೋಷ್.

ಈ ಚಿತ್ರಕ್ಕೆ ಕನ್ನಡದವರಾದ ಸುರೇಶ್ ಮತ್ತು ಅವಿನಾಶ್ ಡೇನಿಯಲ್ ಸಹ ನಿರ್ಮಾಪಕರು. ಹರಿಗೆ ಇಲ್ಲಿನ ಇನ್ನೂ ಒಂದಷ್ಟು ಪ್ರತಿಭೆಗಳನ್ನು ಬಳಸಿಕೊಳ್ಳೋ ಕನಸಿದೆ.