` ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬನಾರಸ್ ಮೊದಲ ಹಾಡು ಬಂತು : ಹೇಗೆ ನಟಿಸಿದ್ದಾರೆ ಜಮೀರ್ ಪುತ್ರ?
Banaras Movie Image

ಮಾಯಗಂಗೆ.. ಮಾಯಗಂಗೆ.. ಮೌನಿಯಾದಳೇ..

ಪವಿತ್ರ ಗಂಗಾನದಿಯ ತಟದ ಮೇಲೆ ಅರಳುವ ಪ್ರೀತಿ.. ನಾಯಕಿ ಪ್ರೀತಿ ಹೇಳುತ್ತಿದ್ದಂತೆ ಗಂಗೆಯಲ್ಲಿ ಮುಳುಗೇಳುವ ನಾಯಕ.. ಅಜನೀಶ್ ಲೋಕನಾಥ್ ಸಂಗೀತ ಗುಂಗು ಹಿಡಿಸೋಕೆ ಶುರು ಮಾಡಿದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಮೋಡಿ ಮಾಡುತ್ತದೆ. ಅರ್ಮಾನ್ ಮಲಿಕ್ ಕಂಠಸಿರಿಗೆ ತಕ್ಕಂತೆ ನಟಿಸಿರುವುದು ಝೈದ್ ಖಾನ್. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಈ ಚಿತ್ರದ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಚೆಂದವಾಗಿ ಕಾಣಿಸುತ್ತಾರೆ. ಚೆನ್ನಾಗಿ ನಟಿಸಿದ್ದಾರೆ ಅನ್ನೋ ಭರವಸೆ ಈ ಹಾಡಿನಲ್ಲಿ ಸಿಗುತ್ತದೆ. ಅಫ್‍ಕೋರ್ಸ್.. ನಿರ್ದೇಶಕರಾಗಿರೋದು ಜಯತೀರ್ಥ.

ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದ ಚಿತ್ರ ನ್ಯಾಷನಲ್ ಖಾನ್ ಪ್ರೊಡಕ್ಷನ್ಸ್ ಬ್ಯಾನರ್‍ನಲ್ಲಿ ತೆರೆಗೆ ಬರುತ್ತಿದೆ. ಝೈದ್ ಖಾನ್ ಎದುರು ನಾಯಕಿಯಾಗಿ ನಟಿಸಿರುವುದು ಶೃಂಗಾರದ ಹೊಗೆ ಮರದಲ್ಲಿ ಹೂ ಬಿಡುವಂತೆ ಮಾಡಿದ ಸೋನಲ್ ಮಂಥೆರೋ. ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ದೇವರಾಜ್, ಸಪ್ನಾ ರಾಜ್.. ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಇದೂ ಕೂಡಾ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಪ್ಯಾನ್ ಇಂಡಿಯಾ ಸಿನಿಮಾ.