` ಕನ್ನಡದ ಆರ್.ಆರ್.ಆರ್. ಸಿನಿಮಾ ನೋಡಿ ಅಭಿಮಾನಿಗಳು ಥ್ರಿಲ್..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕನ್ನಡದ ಆರ್.ಆರ್.ಆರ್. ಸಿನಿಮಾ ನೋಡಿ ಅಭಿಮಾನಿಗಳು ಥ್ರಿಲ್..!
RRR In Kannada

ರೌದ್ರಂ..ರಣಂ..ರುಧಿರಂ.. ಅನ್ನೋ ಲೈನ್ ಇಟ್ಟುಕೊಂಡು ಬಂದ ರಾಜಮೌಳಿ-ರಾಮ್‍ಚರಣ್-ತಾರಕ ರಾಮರಾವ್ ಸಿನಿಮಾ ಆರ್.ಆರ್.ಆರ್. ಇಂಡಿಯಾ ಬಾಕ್ಸಾಫೀಸಿನಲ್ಲಿ ಬರದ ದಾಖಲೆ ಗೊತ್ತೇ ಇದೆ. ಆದರೆ, ಇದು ಆ ಆರ್.ಆರ್.ಆರ್. ಕಥೆ ಅಲ್ವೇ ಅಲ್ಲ. ಕನ್ನಡದ ಆರ್.ಆರ್.ಆರ್. ಸಿನಿಮಾ ಸ್ಟೋರಿ. ಅದು ಎಲ್ಲ ಕಡೆ ಸಿಕ್ಕೋದಿಲ್ಲ. ಕೆಲವೇ ಕೆಲವು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‍ಗಳಲ್ಲಿ ಮಾತ್ರ ಸಿಗುತ್ತೆ. ಅದೂ ಒಂದು ಸಿನಿಮಾ ಅಲ್ಲ.. ಮೂರ್ ಮೂರು ಸಿನಿಮಾ.

ಆರ್. : ರಕ್ಷಿತ್ ಶೆಟ್ಟಿಯವರ 777 ಚಾರ್ಲಿ

ಆರ್. : ರಿಷಬ್ ಶೆಟ್ಟಿಯವರ ಹರಿಕಥೆ ಅಲ್ಲ ಗಿರಿಕಥೆ

ಆರ್. ರಾಜೇಶ್ ಬಿ.ಶೆಟ್ಟಿ ನಟಿಸಿರೋ ತುರ್ತು ನಿರ್ಗಮನ

ಈ ಮೂರೂ ಚಿತ್ರಗಳ ಪೋಸ್ಟರ್‍ನ್ನು ಒಂದೇ ಕಡೆ ಇಟ್ಟು ಇದು ಕನ್ನಡದ ಆರ್.ಆರ್.ಆರ್. ಎಂದು ಖುಷಿ ಪಡುತ್ತಿದ್ದಾರೆ ಫ್ಯಾನ್ಸ್.

777 ಚಾರ್ಲಿ.. ಭಾವನಾತ್ಮಕ ಸಂಚಲನ ಮೂಡಿಸಿ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ. ಹರಿಕಥೆ ಅಲ್ಲ ಗಿರಿಕಥೆ ಕಾಮಿಡಿ ಟ್ರ್ಯಾಕ್‍ನಲ್ಲಿ ನಕ್ಕೂ ನಕ್ಕೂ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸುತ್ತಿದೆ.

ತುರ್ತು ನಿರ್ಗಮನ.. ತನ್ನ ವಿಭಿನ್ನ ಕಥೆ ಮತ್ತು ಕಾನ್ಸೆಪ್ಟ್‍ನಿಂದಾಗಿಯೇ ಕ್ಲಾಸ್ ವರ್ಗದ ಪ್ರೇಕ್ಷಕರನ್ನು ಸೆಳೆಯುತ್ತಿದೆ.