ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಮಿಳುನಾಡಿನ ದೇವಸ್ಥಾನವೊಂದಕ್ಕೆ ಕುಟುಂಬದ ಜೊತೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನ ಮುಂಭಾಗ ನಜ್ಜು ಗುಜ್ಜಾಗಿ ಹೋಗಿದೆ. ಅದೃಷ್ಟವಶಾತ್ ಸೂರಪ್ಪ ಬಾಬು ಮತ್ತು ಅವರ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದೆ.
ಸೂರಪ್ಪ ಬಾಬು ಅವರ ಕಾಲಿಗೆ ಪೆಟ್ಟಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಭಾನುವಾರ ಮುಂಜಾನೆ 3 ಗಂಟೆ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ. ಮುಂಜಾನೆ 3 ಗಂಟೆ ಹೊತ್ತಿನಲ್ಲೂ ಕೂಡಾ ಅಪಘಾತ ಸ್ಥಳಕ್ಕೆ ಬಂದ ಕೆಲವರು ನನ್ನನ್ನು ಗುರುತಿಸಿದರು. ಅವರ ನೆರವಿನಿಂದಲೇ ಆಸ್ಪತ್ರೆ ತಲುಪಿದೆವು. ಮುಂದಿನ ಸೀಟಿನಲ್ಲಿ ಕೂತಿದ್ದೆ. ಕಾಲಿನ ನೋವು ವಿಪರೀತ ಇದೆ ಎಂದಿದ್ದಾರೆ ಸೂರಪ್ಪ ಬಾಬು.
ತಮಿಳುನಾಡಿನ ಬ್ರಹ್ಮ ದೇವಸ್ಥಾನಕ್ಕೆ ಹೊರಟಿದ್ದ ಸೂರಪ್ಪ ಬಾಬು ಅವರ ಕಾರಿನಲ್ಲಿ ಒಟ್ಟು 7 ಜನ ಪ್ರಯಾಣಿಸುತ್ತಿದ್ದರು. ವೈದ್ಯರು ಕೆಲವು ದಿನಗಳ ಕಾಲ ಬೆಡ್ ರೆಸ್ಟ್ ಮಾಡುವಂತೆ ಸೂರಪ್ಪ ಬಾಬು ಅವರಿಗೆ ಸೂಚಿಸಿದ್ದಾರಂತೆ.