` ಚಿತ್ರಲೋಕ ಡಾಟ್ ಕಾಂ.ಗೆ 23ನೇ ವಾರ್ಷಿಕೋತ್ಸವ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಚಿತ್ರಲೋಕ ಡಾಟ್ ಕಾಂ.ಗೆ 23ನೇ ವಾರ್ಷಿಕೋತ್ಸವ
ಚಿತ್ರಲೋಕ ಡಾಟ್ ಕಾಂ.ಗೆ 23ನೇ ವಾರ್ಷಿಕೋತ್ಸವ

22 ವರ್ಷಗಳ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರ ಅಮೃತಹಸ್ತದಿಂದ ಉದ್ಘಾಟನೆಗೊಂಡ ವೆಬ್ ಪೋರ್ಟಲ್ ಚಿತ್ರಲೋಕ ಡಾಟ್ ಕಾಮ್. ಬಹುಶಃ ಕನ್ನಡದ ಮೊದಲ ಪ್ರತ್ಯೇಕ ವೆಬ್‍ಸೈಟ್. ಮಿಕ್ಕಂತೆ ಕೆಲವು ದಿನಪತ್ರಿಕೆಗಳು ವೆಬ್‍ಸೈಟ್ ಹೊಂದಿದ್ದವು. ಆದರೆ ಆನ್‍ಲೈನ್ ಪೋರ್ಟಲ್ ಆಗಿಯೇ ಇಂಡಸ್ಟ್ರಿಗೆ ಕಾಲಿಟ್ಟ ದ್ವಿಭಾಷಾ ವೆಬ್‍ಸೈಟ್ ಚಿತ್ರಲೋಕ ಡಾಟ್ ಕಾಮ್. ಇದು ಕೆ.ಎಂ.ವೀರೇಶ್ ಅವರ ಕನಸಿನ ಕೂಸು. ಈ ವೆಬ್‍ಸೈಟ್ ಜನ್ಮತಾಳಿ.. ಕನ್ನಡದ ನಂ.1 ವೆಬ್‍ಸೈಟ್ ಪಟ್ಟವನ್ನೂ ಅಲಂಕರಿಸಿ, ಗೆದ್ದು, ಒಂದಲ್ಲ ಎರಡು ಬಾರಿ ಲಿಮ್ಕಾ ದಾಖಲೆಯನ್ನೂ ಸೇರಿ ಈಗ 23ವೇ ವರ್ಷಕ್ಕೆ ಕಾಲಿಡುತ್ತಿದೆ.

ಚಿತ್ರಲೋಕ ಅಂಬೆಗಾಲಿಟ್ಟಾಗ ಇಂಡಿಯಾದಲ್ಲಿನ್ನೂ ಗೂಗಲ್ ಕಣ್ಣುಬಿಟ್ಟಿರಲಿಲ್ಲ ಎನ್ನವುದರಲ್ಲಿ ಚಿತ್ರಲೋಕದ ಸಾಹಸ, ಕಲ್ಪನೆಯನ್ನು ಊಹಿಸಿಕೊಳ್ಳಬಹುದು. ಚಿತ್ರಲೋಕ ಶುರುವಿನ ದಿನಗಳಲ್ಲಿ ನಿಂತವರು ಈಗ ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕರಾಗಿರುವ ರವಿ ಹೆಗ್ಡೆ. ಮತ್ತು ಸಾಹಿತಿ ಹಾಗೂ ಕನ್ನಡಪ್ರಭ ಪುರವಣಿ ಸಂಪಾದಕರಾಗಿರುವ ಜೋಗಿ, ಉದಯ ಮರಕಿಣಿ ಮತ್ತಿತರರು. ಈಗ ಚಿತ್ರಲೋಕ ವೆಬ್‍ಸೈಟ್‍ಗೆ ಲಕ್ಷಾಂತರ ಮಂದಿ ಸಬ್‍ಸ್ಕ್ರೈಬರ್ಸ್ ಇದ್ದಾರೆ.

ಇಡೀ ಜಗತ್ತು ವೈ2ಕೆ ಸಮಸ್ಯೆಯಲ್ಲಿ ತೊಳಲಾಡುತ್ತಿರುವಾಗ, 2000 ಇಸವಿಯ ಸೊನ್ನೆಗಳೇ ಇಂಟರ್‍ನೆಟ್‍ನ್ನು ಮುಗಿಸಿಬಿಡುತ್ತವೆ ಎಂಬ ಆತಂಕದಲ್ಲಿದ್ದಾಗ ಹುಟ್ಟಿಕೊಂಡ ವೆಬ್‍ಸೈಟ್ ಚಿತ್ರಲೋಕ. 2000ನೇ ಇಸವಿಯ ಜೂನ್ 26ರಂದು ಪಾರ್ವತಮ್ಮ ರಾಜ್‍ಕುಮಾರ್ ಉದ್ಘಾಟಿಸಿದ ವೆಬ್‍ಸೈಟ್ ಇದು. 21ನೇ ಶತಮಾನದ ಆರಂಭದ ವರ್ಷ ಹುಟ್ಟಿದ ವೆಬ್‍ಸೈಟ್`ಗೀಗ 23ನೇ ವರ್ಷದ ಸಂಭ್ರಮ.

ಸಂಸ್ಥೆಯ ಬೆಂಬಲಕ್ಕೆ ನಿಂತ ಸಮಸ್ತ ಚಿತ್ರರಂಗ, ಗೆಳೆಯರು, ಓದುಗರು, ವೀಕ್ಷಕರು, ಜಾಹೀರಾತುದಾರರಿಗೆ ಧನ್ಯವಾದಗಳು. ಪ್ರೀತಿ, ಬಾಂಧವ್ಯ ಚಾಲ್ತಿಯಲ್ಲಿರಲಿ.

ಕೆ.ಎಂ.ವೀರೇಶ್

ಸಂಪಾದಕರು

ಚಿತ್ರಲೋಕ ಡಾಟ್ ಕಾಮ್