ಪೃಥ್ವಿರಾಜ್ ಸುಕುಮಾರನ್. ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ಗಳಲ್ಲಿ ಒಬ್ಬರು. ಅಯ್ಯಪ್ಪನುಮ್ ಕೋಷಿಯುಮ್, ಬ್ರೊ ಡ್ಯಾಡಿ, ಕೋಲ್ಡ್ ಕೇಸ್, ಡ್ರೈವಿಂಗ್ ಲೈಸೆನ್ಸ್, ಜನಗಣಮನ.. ಹೀಗೆ ಪೃಥ್ವಿರಾಜ್ ಚಿತ್ರಗಳು ಬಾಕ್ಸಾಫೀಸ್ ಮತ್ತು ವಿಮರ್ಶಕರ ವಲಯ ಎರಡೂ ಕಡೆ ಸದ್ದು ಮಾಡುತ್ತಿವೆ. ಲೂಸಿಫರ್ ಸಿನಿಮಾ ನಿರ್ದೇಶಿಸಿ ಗೆದ್ದ ಪೃಥ್ವಿರಾಜ್ ಈಗ ಹೊಂಬಾಳೆ ಜೊತೆಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಅದಕ್ಕೂ ಮೊದಲೇ ಕನ್ನಡಕ್ಕೆ ಬರುತ್ತಿದ್ದಾರೆ. ಕಡುವ ಚಿತ್ರದ ಮೂಲಕ.
ಮಲಯಾಳಂನಲ್ಲಿ ಪೃಥ್ವಿರಾಜ್ ಅವರನ್ನು ಕನ್ನಡ ಚಿತ್ರರಂಗದ ರಾಯಭಾರಿ ಎಂದು ಕರೆಯುತ್ತಾರಂತೆ. ಕಾರಣ ಇಷ್ಟೆ, ಪೃಥ್ವಿರಾಜ್ ಕನ್ನಡದ ಕೆಲವು ಚಿತ್ರಗಳನ್ನು ಕೇರಳದಲ್ಲಿ ಪ್ರಮೋಟ್ ಮಾಡಿದ್ದಾರೆ. ಅವುಗಳಲ್ಲಿ ಗೆದ್ದ ಚಿತ್ರಗಳು ಕೆಜಿಎಫ್ ಮತ್ತು 777 ಚಾರ್ಲಿ. ಇನ್ನೂ ಹಲವು ಚಿತ್ರಗಳನ್ನು ಪೃಥ್ವಿರಾಜ್ ಪ್ರಚಾರ ಮಾಡಿದ್ದಾರೆ. ಈಗ ಕನ್ನಡಕ್ಕೆ ಬರುತ್ತಿದ್ದಾರೆ.