ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಚಿತ್ರ ತಿಥಿ. ಆ ಚಿತ್ರದಲ್ಲಿ ಕಾವೇರಿ ಪಾತ್ರದಲ್ಲಿ ಮಿಂಚಿದ್ದವರು ನಟಿ ಪೂಜಾ. ಕಾವೇರಿಯ ಪಾತ್ರಕ್ಕೆ ರಾಜ್ಯಪ್ರಶಸ್ತಿಯೂ ಸಿಕ್ಕಿತ್ತು. ಆದರೆ ಅದಾದ ಮೇಲೆ ಪೂಜಾ ಹೆಚ್ಚು ನಟಿಸಲಿಲ್ಲ. ಒಂದೆರಡು ಚಿತ್ರಗಳಲ್ಲಿ ನಟಿಸಿ ಚಿತ್ರರಂಗದಿಂದ ದೂರ ಸರಿದುಬಿಟ್ಟರು. ಈಗ ಸುದ್ದಿಯಾಗಿರೋದು ಮದುವೆ ಸುದ್ದಿಯಿಂದ.
ಚಿತ್ರರಂಗದಿಂದ ದೂರವಾದ ಪೂಜಾ ಎಂಸಿಎ ಮುಗಿಸಿ, ಎಮ್ಎನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಈಗ ಪ್ರೇಮ್ ಎಂಬುವವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಪ್ರೇಮ್ ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್. ಡಿಸೆಂಬರ್ನಲ್ಲಿ ಮದುವೆಯಂತೆ.