ಬೆಂಗಳೂರಿನಲ್ಲಿ ಟ್ರೇಲರ್ ಲಾಂಚ್ ಮಾಡಿದ ಬೆನ್ನಲ್ಲೇ ಮುಂಬೈಗೆ ಹೋಗಿರೋ ವಿಕ್ರಾಂತ್ ರೋಣ ಟೀಂ ಅಲ್ಲಿಯೂ ರಣಕಹಳೆ ಮೊಳಗಿಸಿದೆ. ಹಿಂದಿಯಲ್ಲಿ ವಿಕ್ರಾಂತ್ ರೋಣ ಟ್ರೇಲರ್‍ನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದರು. ಈಗ ಮುಂಬೈನಲ್ಲಿ ಪ್ರೀ-ರಿಲೀಸ್ ಈವೆಂಟ್ ಮೂಲಕ ಪ್ರಚಾರಕ್ಕೆ ಇನ್ನಷ್ಟು ಮೆರುಗು ನೀಡಿದೆ ವಿಕ್ರಾಂತ್ ರೋಣ.
ದೃಶ್ಯ ವೈಭವದ ಟ್ರೇಲರಿನಲ್ಲಿ ಅನೂಪ್ ಭಂಡಾರಿ ಎಲ್ಲಿಯೂ ಕಥೆ ಬಿಟ್ಟುಕೊಟ್ಟಿಲ್ಲ. ಆದರೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಎನ್ನುವುದನ್ನು ಮಾತ್ರ ಹೇಳಿದ್ದಾರೆ. ಕಿಚ್ಚ ಸುದೀಪ್ ಬೇರೆಯದೇ ಶೇಡ್‍ನಲ್ಲಿ ಕಾಣಿಸುತ್ತಿದ್ದಾರೆ.
ಇದು ಕನಸಿನ ಸಿನಿಮಾ. ದೊಡ್ಡದಾಗಿಯೇ ಶುರು ಮಾಡಿದ್ದೆವು. ಐಡಿಯಾ ದೊಡ್ಡದಾಗಿತ್ತು. ಸಿನಿಮಾ ಕಾನ್ಸೆಪ್ಟ್ ದೊಡ್ಡದಾಗಿತ್ತು. ರಿಸಲ್ಟ್‍ನ್ನೂ ಕೂಡಾ ದೊಡ್ಡದಾಗಿಯೇ ಎದುರು ನೋಡುತ್ತಿದ್ದೇವೆ ಎಂದಿರೋದು ಸುದೀಪ್.
ಈ ಚಿತ್ರ ಹಾಗೂ ರಕ್ಕಮ್ಮ ಹಾಡಿನ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇನೆ. ಅದೊಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ರಕ್ಕಮ್ಮ ಫರ್ನಾಂಡಿಸ್.