ಕನ್ನಡ ಚಿತ್ರರಂಗದ ಸ್ಟಾರ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಹೊಸ ಸಿನಿಮಾ, 47ನೇ ಸಿನಿಮಾಗೆ ಮುಹೂರ್ತ ನೆರವೇರಿದೆ. ಈ ಚಿತ್ರದ ಹೈಲೈಟ್ ಶಿವಣ್ಣ ಮತ್ತು ಪ್ರಭುದೇವ ಒಟ್ಟಿಗೇ ನಟಿಸುತ್ತಿರುವುದು. ಯೋಗರಾಜ್ ಭಟ್ ನಿರ್ದೇಶನ ಮಾಡುತ್ತಿರೋದು.
ರಾಕ್`ಲೈನ್ ಸ್ಟುಡಿಯೋದಲ್ಲಿ ನಡೆದ ಚಿತ್ರದ ಮುಹೂರ್ತದಲ್ಲಿ ಮೊದಲ ಸೀನ್‍ಗೆ ಕ್ಲಾಪ್ ಮಾಡಿದ್ದು ಗೀತಾ ಶಿವರಾಜಕುಮಾರ್. ಕ್ಯಾಮೆರಾಗೆ ಚಾಲನೆ ಕೊಟ್ಟವರು ಪುಷ್ಪಕುಮಾರಿ ವೆಂಕಟೇಶ್.
ರಾಕ್‍ಲೈನ್ ಸಂಸ್ಥೆ ನಮ್ಮದೇ ಸಂಸ್ಥೆ. ನಮ್ಮ ಮನೆಯ ಸಂಸ್ಥೆ ಇದ್ದಂತೆ. ರಾಕ್`ಲೈನ್ ನನಗೆ ಸ್ನೇಹಿತರಾಗಿ ಬಂದರು. ನಂತರ ನಿರ್ಮಾಪಕರಾದರು. ಅವರ ಸಂಸ್ಥೆಯಲ್ಲಿ ನಟಿಸುತ್ತಿದ್ದೇನೆ. ಯೋಗರಾಜ್ ಭಟ್ ನಿರ್ದೇಶನ, ಪ್ರಭುದೇವ ಅವರ ಜೊತೆ ನಟಿಸುತ್ತಿರೋದು.. ಎಲ್ಲವೂ ಖುಷಿಯೇ ಎಂದವರು ಶಿವಣ್ಣ.
ಹೆಚ್2ಒ ನಂತರ ನಾನು ಕನ್ನಡದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರೋ ಸಿನಿಮಾ ಇದು. ಶಿವಣ್ಣ ಜೊತೆ ಮೊದಲ ಬಾರಿಗೆ ಸಿನಿಮಾ ಮಾಡ್ತಿದ್ದೇನೆ. ಎಕ್ಸೈಟ್ ಆಗಿದ್ದೇನೆ ಎಂದವರು ಪ್ರಭುದೇವ.
ಚಿತ್ರದ ಚಿತ್ರೀಕರಣ ಜುಲೈನಲ್ಲಿ ಶುರುವಾಗಲಿದೆ.