ತರಲೆ.. ತುಂಟಾಟ.. ಪೋಲಿ.. ಎಂದೆಲ್ಲ ತನ್ನವರಿಂದಲೇ ಕರೆಸಿಕೊಳ್ಳೋ ವಿಜಯ್ ಪ್ರಸಾದ್. ಪಾತ್ರ ಯಾವುದೇ ಇರಲಿ.. ಅದಕ್ಕೆ ತಕ್ಕಂತೆ ಸೆಟ್ ಆಗೋ ನೀನಾಸಂ ಸತೀಶ್.. ಇವರಿಬ್ಬರ ಜಂಟಿ ಕನಸಿನ ಸಿನಿಮಾ ಪೆಟ್ರೋಮ್ಯಾಕ್ಸ್. ಜುಲೈ 15ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸತೀಶ್ ಮತ್ತು ವಿಜಯ್ ಪ್ರಸಾದ್ ಇಬ್ಬರೂ ನಿರ್ಮಾಪಕರು.
ನಾಲ್ವರು ಅನಾಥ ಹುಡುಗರು ಒಬ್ಬ ಸೀನಿಯರ್ ಮಹಿಳೆಯನ್ನು ಲವ್ ಮಾಡೋ ಕಥೆ ಸಿನಿಮಾದಲ್ಲಿದೆ. ಸತೀಶ್ ಜೊತೆಗೆ ಹರಿಪ್ರಿಯಾ, ಕಾರುಣ್ಯ ರಾಮ್, ನಾಗಭೂಷಣ್, ಹೇಮಾ ದತ್ ನಟಿಸಿರುವ ಚಿತ್ರವಿದು. ಪೆಟ್ರೋಮ್ಯಾಕ್ಸ್ : ಮನೆದೇವ್ರಾಣೆಗೂ ಅದಲ್ಲ... ಸಿನಿಮಾ ಜುಲೈ 15ಕ್ಕೆ ರಿಲೀಸ್ ಆಗಲಿದೆ.