ನಗುವಿನಲ್ಲಿ.. ಮಾತಿನಲ್ಲಿ.. ಕನ್ನಡಿಗರ ಮನಗೆದ್ದ ಆ್ಯಂಕರ್ ಅನುಶ್ರೀ ಈಗ ಹೊಸ ಮನೆಗೆ ಶ್ರೀಕಾರ ಹಾಕಿದ್ದಾರೆ. ಜಯನಗರ ಹೌಸಿಂಗ್ ಸೊಸೈಟಿ ಲೇಔಟ್‍ನ ಸುಬ್ರಹ್ಮಣ್ಯಪುರಂನಲ್ಲಿ ಅನುಶ್ರೀ ಸೈಟ್ ಖರೀದಿಸಿದ್ದಾರೆ. ಹೊಸ ಮನೆ ಕಟ್ಟುವುದಕ್ಕೆ ಭೂಮಿ ಪೂಜೆಯನ್ನೂ ನೆರವೇರಿಸಿದ್ದಾರೆ.
ನನ್ನ ತಾಯಿಗೊಂದು ಸ್ವಂತ ಮನೆ ಕಟ್ಟಿಸಬೇಕು ಎನ್ನುವುದು ನನ್ನ ಕನಸು ಅನ್ನೋದನ್ನ ಅನುಶ್ರೀ ಹಲವು ಬಾರಿ ಹೇಳಿಕೊಂಡಿದ್ದರು. ಆ ಕನಸು ಈಗ ನನಸು ಮಾಡುವ ಹಾದಿಯಲ್ಲಿದ್ದಾರೆ. ತಾಯಿ ಮತ್ತು ತಮ್ಮನೊಂದಿಗೆ ಭೂಮಿಪೂಜೆ ಮಾಡಿದ್ದಾರೆ ಅನುಶ್ರೀ.
ನಿರೂಪಕಿ ಈಗ ಸ್ಟಾರ್ ಆಂಕರ್. ವೃತ್ತಿ ಜೀವನ ಶುರುವಾಗಿದ್ದು ಟಿವಿ ಶೋಗಳಿಂದಲೇ. ಈಗ ಜೀಟಿವಿಯಲ್ಲಿ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಿರೂಪಣೆ ಮಾಡುತ್ತಿರುವ ಅನುಶ್ರೀ, ಈಟಿವಿ ಕನ್ನಡ, ಕಸ್ತೂರಿ ಚಾನೆಲ್ಲುಗಳಲ್ಲೂ ಕೆಲಸ ಮಾಡಿದ್ದಾರೆ. ಚಿತ್ರನಟಿ ಹಾಗೂ ಡ್ಯಾನ್ಸರ್ ಆಗಿಯೂ ಹೆಸರು ಮಾಡಿರುವ ಅನುಶ್ರೀ ಅವರ ಕನಸಿಗೆ ಶುಭವಾಗಲಿ.