` ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ
ವೇದ ಪೋಸ್ಟರ್ ಲಾಂಚ್‍ನಲ್ಲಿತ್ತು ಸಂಪೂರ್ಣ ರಾಜ್ ಕುಟುಂಬ

ವೇದ. ಗೀತಾ ನಿರ್ಮಾಪಕರಾಗಿರುವ ಮೊದಲ ಹಾಗೂ ಶಿವಣ್ಣ ಅವರ 125ನೇ ಸಿನಿಮಾ. ಸಿನಿಮಾ ಪೋಸ್ಟರ್ ಲಾಂಚ್ ಕಾರ್ಯಕ್ರಮಕ್ಕೆ ರಾಜ್ ಅವರ ಕುಟುಂಬವೇ ಬಂದಿತ್ತು. ಅನಂತನಾಗ್, ಅನಿಲ್ ಕುಂಬ್ಳೆ, ದುನಿಯಾ ವಿಜಯ್ ಕೂಡಾ ಇದ್ದರು. ಬ್ಯಾನರ್ ಲಾಂಚ್ ಮಾಡಿದವರೆಲ್ಲ ಗೀತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದರು.

ಅನಂತ್ ನಾಗ್ : ರಾಜ್ ಯಾರಿಗೂ ಏನೂ ಹೇಳ್ತಾ ಇರಲಿಲ್ಲ. ತಮ್ಮ ನಡವಳಿಕೆ, ಅಭಿನಯದಲ್ಲೇ ಎಲ್ಲವನ್ನೂ ಕಲಿಸಿಕೊಟ್ಟರು. ಅವರೊಂದಿಗೆ ಒಂದು ಸೃಜನಶೀಲ ತಂಡವೇ ಇತ್ತು. ಸಮಾಜಕ್ಕೆ ಧೈರ್ಯ ಹೇಳೋ ಸಿನಿಮಾ ಮಾಡ್ತಿದ್ರು. ಶಿವರಾಜಕುಮಾರ್ ಕೂಡಾ ಆ ಹಾದಿಯಲ್ಲೆ ಸಾಗಲಿ.

ಅನಿಲ್ ಕುಂಬ್ಳೆ : ಶಿವರಾಜಕುಮಾರ್ ಅವರನ್ನ ಒಳ್ಳೆ ಟೆಸ್ಟ್ ಪ್ಲೇಯರ್ ಅಂತಾ ಹೇಳಬಹುದು. ಶಿವಣ್ಣ, ಅಪ್ಪು ನಮ್ಮನ್ನೆಲ್ಲ ಮಾತನಾಡಿಸೋಕೆ ಸ್ಟೇಡಿಯಂಗೆ ಬರ್ತಾ ಇದ್ರು. ಒಂದ್ಸಲ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆಗಿದ್ದಾಗ, ನಾವು ಅಣ್ಣಾವ್ರ ಮನೆಗೆ ಹೋಗಿ ಎರಡು ಗಂಟೆ ಮಾತನಾಡಿಕೊಂಡು ಬಂದಿದ್ವಿ. ಈಗ ಗೀತಾ ಸಿನಿಮಾ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ.

ಶಿವರಾಜಕುಮಾರ್ : ನನ್ನ ಸಕ್ಸಸ್‍ಗೆ ಕಾರಣ ನನ್ನ ಕುಟುಂಬ.

ಗೀತಾ ಶಿವರಾಜಕುಮಾರ್ : ಅವರು.. ಅವರ ಹಿಂದಿನ ಸಕ್ಸಸ್ ಶಕ್ತಿ ನಾನು ಅಂತಾರೆ. ನಾನಲ್ಲ. ಅದು ಅಪ್ಪಾಜಿ. ಅಮ್ಮ, ರಾಘು, ಅಪ್ಪು, ಅವರ ತಂಗಿಯರು. ಅಭಿಮಾನಿ ದೇವರುಗಳು. ಈಗ ವೇದ ಸಿನಿಮಾ ಬರ್ತಿದೆ. ಅದು ನಿಮ್ಮದು.

ಕಾರ್ಯಕ್ರಮದ ಕೊನೆಯಲ್ಲಿ ಇಡೀ ಕುಟುಂಬವನ್ನು ವೇದಿಕೆಗೆ ಕರೆದು ತಂದರು ಶಿವಣ್ಣ. ಅಶ್ವಿನಿ ಪುನೀತ್ ಮತ್ತು ಅವರ ಮಕ್ಕಳನ್ನು ತಮ್ಮ ಅಕ್ಕಪಕ್ಕ ಕೂರಿಸಿಕೊಂಡು ಫ್ಯಾಮಿಲಿ ಫೋಟೋ ತೆಗೆಸಿಕೊಂಡ ಕ್ಷಣ ಭಾವುಕರನ್ನಾಗಿಸಿದ್ದು ನಿಜ.