` ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ
Vikranth Rona Image

ಇಡೀ ಚಿತ್ರರಂಗವೇ ಅಲ್ಲಿತ್ತು. ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಯೋಗರಾಜ್ ಭಟ್, ಯುವ ರಾಜಕುಮಾರ್,  ನಂದಕಿಶೋರ್, ಅರ್ಜುನ್ ಜನ್ಯ, ಇಂದ್ರಜಿತ್ ಲಂಕೇಶ್.. ಹೀಗೆ ಬಹುತೇಕ ಇಂಡಸ್ಟ್ರಿಯ ಗಣ್ಯರು ಅಲ್ಲಿದ್ದರು. ವಿಕ್ರಾಂತ್ ರೋಣನಿಗೆ ಶುಭ ಕೋರಿದರು. ಟ್ರೇಲರ್ ಎಲ್ಲೆಡೆ ರಿಲೀಸ್ ಆಗುವ ಮುನ್ನ ಚಿತ್ರರಂಗದ ಗಣ್ಯರಿಗೆ ಟ್ರೇಲರ್ ತೋರಿಸಿದರು ಕಿಚ್ಚ ಸುದೀಪ್, ಅನೂಪ್ ಭಂಡಾರಿ ಮತ್ತು ಜಾಕ್ ಮಂಜು.

ರವಿಚಂದ್ರನ್ : ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎನ್ನುತ್ತಿದ್ದರು. ಈಗ ಎಷ್ಟೊಳ್ಳೆ ಸಿನಿಮಾ ಬರುತ್ತಿವೆ ಎಂದರೆ ಜನ ಬರುತ್ತಿದ್ದಾರೆ. ಚಿತ್ರಮಂದಿರಗಳೇ ಸಾಲುತ್ತಿಲ್ಲ. ವಿಆರ್ ಎಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ. ರವಿಚಂದ್ರ.

ರಕ್ಷಿತ್ ಶೆಟ್ಟಿ : ಸುದೀಪ್ ಸರ್ ಅಂತಹ ಅದ್ಭುತ ಟ್ಯಾಲೆಂಟೆಡ್ ಕಲಾವಿದ ನನ್ನ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ಮೆಸೇಜ್ ಮಾಡ್ತಾರೆ. ಭಾರತದ ಅದ್ಭುತ ಟ್ಯಾಲೆಂಟೆಡ್ ಆಕ್ಟರ್‍ಗಳಲ್ಲಿ 5 ಜನರ ಪಟ್ಟಿ ಮಾಡಿದರೆ ಅವರಲ್ಲಿ ಸುದೀಪ್ ಒಬ್ಬರು.

ಶಿವರಾಜಕುಮಾರ್ : ಸುದೀಪ್ ನನ್ನ ಕ್ಲೋಸ್ ಫ್ರೆಂಡ್. ಬ್ರದರ್. ಫ್ಯಾಮಿಲಿ. ಅವರ ಶಾಂತಿನಿವಾಸಕ್ಕೆ ಸಣ್ಣದಾಗಿ ಧ್ವನಿ ನೀಡಿದ್ದೆ. ಅವರು ನನ್ನ ಹೃದಯಕ್ಕೆ ಹತ್ತಿರ. ಅನೂಪ್ ಅವರ ರಂಗಿತರಂಗ ಥಿಯೇಟರಿನಲ್ಲೇ ನೋಡಿದ್ದೆ. ಈ ಸಿನಿಮಾವನ್ನೂ ಚೆನ್ನಾಗಿ ಮಾಡಿದ್ದಾರೆ.

ರಮೇಶ್ ಅರವಿಂದ್ : ಸಿನಿಮಾ ನೋಡಿದಾಗ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತೆ. ಕ್ಯಾಮೆರಾ, ಮ್ಯೂಸಿಕ್ ಎಲ್ಲವೂ ಸಖತ್ತಾಗಿದೆ. ಸೂಪರ್ ಹಿಟ್ ಆಗುವ ಎಲ್ಲ ಸೂಚನೆ ಇದೆ.

ಡಾಲಿ ಧನಂಜಯ್ : ಸರ್, ಅದ್ಭುತ. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ.  ಈಗ ನಾವು ಹೊರಗೆ ಹೋದಾಗ ಕನ್ನಡ ಇಂಡಸ್ಟ್ರಿ ಅಂತಾ ಹೇಳಿಕೊಳ್ಳೋಕೆ ಹೆಮ್ಮೆ. ನೀವು ಫೇಸ್. ಎಲ್ಲ ಕಡೆ ನಿಮ್ಮ ಹೆಸರಿದೆ. ಎಲ್ಲರಿಗೂ ಸಪೋರ್ಟ್ ಮಾಡ್ತೀರ. ಬೆಳೆಸ್ತೀರಾ. ಈ ಸಿನಿಮಾ ಒಟ್ಟಿಗೇ ಫ್ಯಾಮಿಲಿ ಸಮೇತ ನೋಡೋ ಸಿನಿಮಾ.

ಯೋಗರಾಜ್ ಭಟ್ : ತುಂಬಾ ಹತ್ತಿರದ ಜೀವ ಸುದೀಪ್ ಅವರು. ಜಾಕ್ವೆಲಿನ್ ಕುಣಿತವನ್ನ ಮತ್ತೆಮತ್ತೆ ಮೊಬೈಲಿನಲ್ಲಿ ನೋಡ್ತೀವಿ. ಪ್ರೇಕ್ಷಕನಾಗಿ ಸಿನಿಮಾ ನೋಡೋಕೆ ಕಾಯ್ತಿದ್ದೇನೆ.

ರಿಷಬ್ ಶೆಟ್ಟಿ : ನಾನು ಸುದೀಪ್ ಸರ್ ಫ್ಯಾನ್ ಅಸೋಸಿಯೇಷನ್ ಕಡೆಯಿಂದ ಬಂದದಿದ್ದೇನೆ. ಟ್ರೇಲರ್ ಅದ್ಬುತವಾಗಿದೆ. ಸುದೀಪ್ ಸರ್ ಜೊತೆ ಒಂದು ಸಿನಿಮಾ ಮಾಡೇ ಮಾಡ್ತೀನಿ.

ಅರ್ಜುನ್ ಜನ್ಯ : ಸುದೀಪ್ ಸರ್ ನನ್ನ ಗಾಡ್ ಫಾದರ್.

ರಾಜ್ ಬಿ.ಶೆಟ್ಟಿ : ಅವರ ಸಿನಿಮಾ ನೋಡೋಕೆ ಮನೆಯಲ್ಲಿ ಸುಳ್ಳು ಹೇಳಿ ಹೋಗ್ತಿದ್ದೆ. ಈಗ ಅವರ ಸಿನಿಮಾ ಟ್ರೇಲರ್‍ನ್ನ ಎಲ್ಲರಿಗಿಂತ ಮೊದಲು ನೋಡೋ ಭಾಗ್ಯ ಸಿಕ್ಕಿದೆ.

ಜಾಕ್ ಮಂಜು : ಸುದೀಪ್ ಸರ್ ಇಲ್ಲದೆ ಈ ಸಿನಿಮಾ ಆಗ್ತಾ ಇರಲಿಲ್ಲ. ಪ್ರಿಯಾ ಮೇಡಂ ಸಹಾಯದಿಂದ ಈ ಕಥೆ ಹೇಳಿದವಿ. ಜಾಕ್ವೆಲಿನ್ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಸುದೀಪ್ ಸರ್‍ಗೆ ತುಂಬಾ ಥ್ಯಾಂಕ್ಸ್

ಅನೂಪ್ ಭಂಡಾರಿ : ಈ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಆಗೋಕೆ ಕಾರಣ ಸುದೀಪ್. ಅವರಿಗೆ ನನ್ನ ಥ್ಯಾಂಕ್ಸ್.

ವೇದಿಕೆಯಲ್ಲಿದ್ದವರೆಲ್ಲ ವಿಕ್ರಾಂತ್ ರೋಣ ಟ್ರೇಲರ್ ನೋಡಿದ್ದಾರೆ. ಇವತ್ತು ಇಡೀ ದೇಶ ಟ್ರೇಲರ್ ನೋಡಲಿದೆ. ಪ್ರತಿ ಭಾಷೆಯಲ್ಲೂ ಆಯಾ ಚಿತ್ರರಂಗದ ಸ್ಟಾರ್ ಕಲಾವಿದರೇ ಚಿತ್ರದ ಟ್ರೇಲರ್‍ನ್ನು ಡಿಜಿಟಲ್ ಲಾಂಚ್ ಮಾಡುತ್ತಿದ್ದಾರೆ.