ಕುತ್ತಿಗೆ ಮೂಳೆಗೆ ಪೆಟ್ಟು ಮಾಡಿಕೊಂಡು ಅಪಾಯದ ಅಂಚಿಗೆ ಹೋಗಿದ್ದ ನಟ ದಿಗಂತ್ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ. ಇನ್ನು 3 ತಿಂಗಳು ದಿಗಂತ್ ಸಂಪೂರ್ಣ ರೆಸ್ಟ್ ಮಾಡಬೇಕು.
ವೆಕೇಷನ್ಗೆ ಅಂತಾ ಹೋಗಿದ್ವಿ. ಸಮ್ಮರ್ ಸಾಲ್ಟ್ ಮಾಡೋಕೆ ಹೋಗಿ ಸ್ಪೈನಲ್ ಕಾರ್ಡ್ಗೆ ಡ್ಯಾಮೇಜ್ ಮಾಡಿಕೊಂಡಿದ್ದರು. ಡ್ಯಾಮೇಜ್ ಜಾಸ್ತಿ ಆದರೆ ಅನ್ನೋ ಆತಂಕದಲ್ಲಿ ಏರ್ ಲಿಫ್ಟ್ ಮಾಡಿಸಿದ್ವಿ. ಸರ್ಜರಿ ಆಗಿದೆ.
ಈಗ ಅವರೇ ಎದ್ದು ಟಾಯ್ಲೆಟ್ಗೆ ಹೋಗ್ತಾರೆ. ಊಟ ಮಾಡ್ತಿದ್ದಾರೆ.. ಎಂದು ಮಾಹಿತಿ ನೀಡಿದ್ದಾರೆ ದಿಗಂತ್ ಅವರ ಪತ್ನಿ ಐಂದ್ರಿತಾ ರೇ.