ವಾಸುಕಿ ವೈಭವ್ ಮತ್ತೊಮ್ಮೆ ತಮ್ಮ ಟ್ರಂಪ್ ಕಾರ್ಡ್ನಲ್ಲಿ ಗೆದ್ದಿದ್ದಾರೆ. ಒನ್ಸ್ ಎಗೇನ್ ಈ ಬಾರಿಯೂ ವೇದಾಂತ ಇದೆ. ಈ ಬಾರಿಯ ಹರಿಕಥೆ ಅಲ್ಲ ಗಿರಿಕಥೆಯ ಹಾಡಿನಲ್ಲಿ ಒಂದಿಷ್ಟು ವೇದಾಂತವನ್ನ ಕಥೆಗೆ ತಕ್ಕಂತೆ ತಂದಿಟ್ಟಿದ್ದಾರೆ. ಕೇಳೋಕೆ ಹಿತವಾಗಿದೆ. ಕೇಳುತ್ತಾ ಕೇಳುತ್ತಾ ಮನಸನ್ನ ಮುಟ್ಟಿ ಮುಟ್ಟಿ ನೋಡಿಕೊಳ್ಳುವಂತಿದೆ. ಸಾಹಿತ್ಯ ಯೋಗರಾಜ್ ಭಟ್ಟರದ್ದು.
ರಿಷಬ್ ಶೆಟ್ಟಿ ಹೀರೋ ಆಗಿರೋ ಚಿತ್ರದ ಈ ಹಾಡಿನಲ್ಲಿ ಬರುವ ಒಂದಷ್ಟು ಸಾಲುಗಳಲ್ಲಿ ಮನುಷ್ಯನ ಜನ್ಮ ಜಾಲಾಡಿದ್ದಾರೆ ಭಟ್ಟರು. ಭಟ್ಟರ ಹಾಡಿಗೆ ಅಷ್ಟೇ ಕೂಲ್ ಆಗಿ ಧ್ವನಿ ಕೊಟ್ಟಿರೋದು ಸಂಗೀತ ನಿರ್ದೇಶಕ ವಾಸುಕಿ ವೈಭವ್. ಸಂಗೀತವೂ ಅವರದ್ಧೇ.
ಎಲ್ಲಾನೂ ನಶ್ವರ..
ಹಾಗಂತ ಕಾಸು ಮಾಡ್ದೆ ಇರ್ತರಾ..
ಇಲ್ಲಿ ಒಳ್ಳೆ ದಾರಿ ನೂರಎಂಟು ಇರ್ತವೆ..
ಆದ್ರೂ ಕಳ್ಳ ದಾರಿ ಕಡೆಗೆ ಕಾಲು ಓಡ್ತವೆ..
ಇನ್ನೆಂಥ ಬೇವರ್ಸಿ ಇರ್ಬೇಡ ಮನ್ಸ..
ಮುಚ್ಕೊಂಡು ಇರ್ದೇನೆ ಕಟ್ಕೊಂಡ ಕನ್ಸ..
ಚಂಬು ಹುಡ್ಕಲು ಹೋಗಿ..
ಹಂಡೆ ಕಳ್ಕಂಡ ಕಥೆಯಾ..
ಇಂತಹ ಸಾಲುಗಳಿಂದಲೇ ಆಪ್ತವಾಗು ಹಾಡು ಇನ್ನೆಂಥ ಬೇವರ್ಸಿ ಇರಬೇಡ ಮನ್ಸ. ಹಾಡು ರಿಲೀಸ್ ಆಗಿದೆ. ಸಿನಿಮಾ ಜೂನ್ 24ಕ್ಕೆ ರಿಲೀಸ್ ಆಗ್ತಿದೆ. ರಿಷಬ್ ಎದುರು ತಪಸ್ವಿನಿ ಪೂಣಚ್ಚ, ರಚನಾ ಇಂದರ್ ನಾಯಕಿಯರಾಗಿ ನಟಿಸಿದ್ದಾರೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದ ಚಿತ್ರಕ್ಕೆ ಸಂದೇಶ್ ನಾಗರಾಜ್ ನಿರ್ಮಾಪಕರು.