ಝೀ ಸ್ಟುಡಿಯೋದವರು ಒಂದು ಟ್ವೀಟ್ ಮಾಡಿದ್ರು. ಡೋಂಟ್ ಫಿಯರ್.. ಡೋಂಟ್ ಫರ್ಗಿವ್. ಹೆದರಬೇಡ.. ಕ್ಷಮಿಸಬೇಡ.. ಅನ್ನೋದಷ್ಟೇ ಅದರ ಅರ್ಥ. ಗುರುವಾರ ರಾತ್ರಿ 8ಕ್ಕೆ ಬ್ರೇಕ್ ಮಾಡಲಿದ್ದೇವೆ ಎಂದಿದ್ದೇ ತಡ.. ಗಾಂಧಿನಗರ ಮತ್ತು ಪ್ರೇಕ್ಷಕರು ಚುರುಕಾಗಿ ಹೋದರು. ಕೆಲವೇ ಗಂಟೆಗಳಲ್ಲಿ ಸುದ್ದಿ ಬ್ರೇಕ್ ಆಗಿತ್ತು.
ಗೀತಾ ಸ್ಟುಡಿಯೋಸ್ ಮೂಲಕ ಶಿವಣ್ಣ ಮೊದಲ ಬಾರಿಗೆ ನಿರ್ಮಾಪಕರಾಗಿರೋ ಸಿನಿಮಾ. ಶಿವಣ್ಣ ಅಭಿನಯದ 125ನೇ ಸಿನಿಮಾದ ಬ್ರೇಕಿಂಗ್ ನ್ಯೂಸ್ ಇದು. ವೇದ ಈಗ ಝೀ ಸ್ಟುಡಿಯೋಸ್ ಮಡಿಲಿಗೆ ಹೋಗಿದೆ.
ಎ. ಹರ್ಷ ನಿರ್ದೇಶನದ ಚಿತ್ರವಿದು. ಶಿವಣ್ಣ ಜೊತೆ ವಜ್ರಕಾಯ, ಭಜರಂಗಿ ಮತ್ತು ಭಜರಂಗಿ 2 ನಿರ್ದೇಶನ ಮಾಡಿ ಮೂರೂ ಚಿತ್ರಗಳಲ್ಲಿ ಗೆದ್ದಿರುವ ಹರ್ಷ ಈಗನ ಅವರ 4ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. 1960ರ ದಶಕದಲ್ಲಿ ನಡೆಯುವ ಕಥೆಯೊಂದನ್ನು ಹೆಣೆದಿದ್ದಾರೆ ಹರ್ಷ. ಭರ್ಜರಿ ಸ್ಟುಡಿಯೋ ಸೆಟ್ ಹಾಕಿರುವ ಹರ್ಷ, ಚಿತ್ರದ ಯಾವೊಂದು ಗುಟ್ಟನ್ನೂ ಬಿಟ್ಟುಕೊಟ್ಟಿಲ್ಲ. ಎಲ್ಲವೂ ಸಸ್ಪೆನ್ಸ್. ಈಗಲೂ ಅಷ್ಟೆ, ಇಡೀ ಚಿತ್ರತಂಡ ಸೀಕ್ರೆಟ್ ಆಗಿಟ್ಟುಕೊಂಡಿದ್ದರೆ ಹೇಗೋ ಒಂದು ಸೀಕ್ರೆಟ್ ಹೊರಬಿದ್ದಿದೆ. ಅಧಿಕೃತವಾಗೋದು ರಾತ್ರಿ 8 ಗಂಟೆಗೆ. ಅಂದಹಾಗೆ ಇವತ್ತು ಗೀತಾ ಶಿವರಾಜಕುಮಾರ್ ಹುಟ್ಟುಹಬ್ಬ.