ಗೋವಾದಲ್ಲಿ ನಟ ದಿಗಂತ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದೆ. ಫ್ಯಾಮಿಲಿ ಜೊತೆ ಗೋವಾಗೆ ಟ್ರಪ್ ಹೋಗಿದ್ದ ದಿಗಂತ್ ಅವರು ಬಿದ್ದು ಕುತ್ತಿಗೆಯ ಮೂಳೆಗೆ ಬಲವಾದ ಏಟು ಬಿದ್ದಿದೆ. ಭಾನುವಾರವೇ ಘಟನೆ ನಡೆದಿದೆ. ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್ ಅವರನ್ನು ಪತ್ನಿ ಐಂದ್ರಿತಾ ರೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಏರ್ ಲಿಫ್ಟ್ ಮೂಲಕ ಕರೆತರುತ್ತಿದ್ದಾರೆ.
ಬೀಚ್ನಲ್ಲಿ ಸಮ್ಮರ್ ಸಾಲ್ಟ್ ಹೊಡೆಯುವಾಗ ಆಯತಪ್ಪಿದ್ದಾರೆ. ಹೀಗಾಗಿ ಕುತ್ತಿಗೆಗೆ ಬಲವಾದ ಏಟು ಬಿದ್ದಿದೆ. ಕುತ್ತಿಗೆಯ ಮೂಳೆ ಮುರಿದಿರಬಹುದು ಎಂದು ಹೇಳಲಾಗುತ್ತಿದೆ.