ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ ಸಿನಿಮಾಗಳು ನಿರ್ಮಾಪಕರಿಗೆ ಲಾಸ್ ಮಾಡಲ್ಲ. ಈ ಮಾತನ್ನು ಹಲವು ನಿರ್ಮಾಪಕರು ಓಪನ್ ಆಗಿ ಹೇಳ್ತಾರೆ. ಅದು ಮತ್ತೊಮ್ಮೆ ಪ್ರೂವ್ ಆಗಿರೋದು ಬೈರಾಗಿ ವಿಷಯದಲ್ಲಿ. ಬೈರಾಗಿ ರಿಲೀಸ್ ಆಗುತ್ತಿರೋದು ಜುಲೈ 1ಕ್ಕೆ. ಆದರೆ ಈಗಾಗಲೇ ಸಿನಿಮಾ 10 ಕೋಟಿ ಬಿಸಿನೆಸ್ ಮಾಡಿದೆ.
ಬೈರಾಗಿ ಚಿತ್ರದ ಓಟಿಟಿ ಮತ್ತು ಸ್ಯಾಟಲೈಟ್ ಹಕ್ಕುಗಳು ಮಾರಾಟವಾಗಿದ್ದು 10 ಕೋಟಿ ಬಿಸಿನೆಸ್ ಆಗಿದೆ ಅನ್ನೋ ವಿಷಯ ಸ್ವತಃ ನಿರ್ಮಾಪಕರಿಂದಲೇ ಹೊರಬಿದ್ದಿದೆ. ಕೃಷ್ಣ ಸಾರ್ಥಕ್ ಬೈರಾಗಿಯನ್ನು ಸ್ಪೆಷಲ್ ಆಗಿ ಪ್ರಚಾರ ಮಾಡುತ್ತಿದ್ದು, ಜೂನ್ 25ಕ್ಕೆ ಪ್ರೀ ರಿಲೀಸ್ ಈವೆಂಟ್ ಶೋ ಇಟ್ಟುಕೊಂಡಿದ್ದಾರೆ. ಅದೂ ಚಾಮರಾಜನಗರದಲ್ಲಿ. ಅಲ್ಲಿಯವರೆಗೆ ರೋಡ್ ಶೋಗಳಿವೆ. ಜೂನ್ 24ರಿಂದ ಬೆಂಗಳೂರಿನಿಂದ ಹೊರಡುವ ರೋಡ್ ಶೋ ಚಾಮರಾಜ ನಗರ ತಲುಪೋದು ಜೂನ್ 25ಕ್ಕೆ.
ಶಿವಣ್ಣಗೆ ಇದು 123ನೇ ಸಿನಿಮಾ. ನಿರ್ದೇಶಕ ವಿಜಯ್ ಮಿಲ್ಟನ್ ಈ ಚಿತ್ರದಲ್ಲಿ ಶಿವಣ್ಣ ಜೊತೆ ಡಾಲಿಯನ್ನೂ ಸೇರಿಸಿದ್ದಾರೆ. ಒಂದು ಹಾಡಿಗೆ ಶರಣ್ ದನಿಯಾಗಿದ್ದರೆ, ಇನ್ನೊಂದು ಹಾಡಿಗೆ ವಸಿಷ್ಠ ಸಿಂಹ ದನಿಯಾಗಿದ್ದಾರೆ.
ಚಿತ್ರದಲ್ಲಿ ಪೃಥ್ವಿ ಅಂಬರ್, ಅಂಜಲಿ, ಯಶ ಶಿವಕುಮಾರ್, ಶಶಿಕುಮಾರ್, ಅನುಪ್ರಭಾಕರ್, ಚಿಕ್ಕಣ್ಣ.. ಹೀಗೆ ಹಲವರು ನಟಿಸಿದ್ದಾರೆ.