ಮರಿ ಟೈಗರ್ ವಿನೋದ್ ಪ್ರಭಾಕರ್ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಚಿತ್ರದ ಟೈಟಲ್ ಮಾದೇವ. ಚಿರಂಜೀವಿ ಸರ್ಜಾ ಅವರ ಖಾಕಿ ಚಿತ್ರ ನಿರ್ದೇಶಿಸಿದ್ದ ನವೀನ್ ರೆಡ್ಡಿ ಈ ಚಿತ್ರಕ್ಕೆ ಡೈರೆಕ್ಟರ್.
ಇದೊಂದು ಎಮೋಷನಲ್ ಡ್ರಾಮಾ. 80ರ ದಶಕದ ಕಾಲದ ಕಥೆ. ಬಹುತೇಕ ಕಥೆ ರೈಲು ಮತ್ತು ಜೈಲಿನಲ್ಲಿ ನಡೆಯುತ್ತೆ ಎಂದು ಮಾಹಿತಿ ನೀಡಿದ್ದಾರೆ ನವೀನ್ ರೆಡ್ಡಿ. ಯೋಗ ದಿನದಂದೇ ಚಿತ್ರ ಸೆಟ್ಟೇರುತ್ತಿರೋದು ವಿಶೇಷ. ಈ ಚಿತ್ರಕ್ಕೆ ಸೆಂಥಿಲ್ ಕುಮಾರ್ ಅಸಿಸ್ಟೆಂಟ್ ಆಗಿದ್ದ ಬಾಲಕೃಷ್ಣ ತೋಟಾ ಸಿನಿಮಾಟೋಗ್ರಫಿ ಇದೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ನವೀನ್ ರೆಡ್ಡಿ.
ವಿನೋದ್ ಪ್ರಭಾಕರ್ ಜೊತೆಗೆ ಶೃತಿ, ಅಚ್ಯುತ್ ಕುಮಾರ್ ನಟಿಸುತ್ತಿದ್ದಾರೆ. ಸದ್ಯಕ್ಕೆ ವಿನೋದ್ ಪ್ರಭಾಕರ್ ಅವರೇ ನಿರ್ಮಾಪಕರಾಗಿರುವ ಲಂಕಾಸುರ ರಿಲೀಸ್ ಆಗುವ ಹಂತದಲ್ಲಿದೆ.