ಬಹುಶಃ ಪ್ರೇಮಿಸಂ ಚಿತ್ರ ಇರಬೇಕು. 2010ರಲ್ಲಿ ರಿಲೀಸ್ ಆಗಿದ್ದ ಚಿತ್ರವದು. ಅದೂ ಕೂಡಾ ಸುನಿಲ್ ರಾವ್ ಅತಿಥಿ ನಟನಾಗಿ ಕಾಣಿಸಿಕೊಂಡಿದ್ದ ಸಿನಿಮಾ. ಬಾಲನಟನಾಗಿ ಚಿತ್ರರಂಗಕ್ಕೆ ಬಂದು, ಸೀರಿಯಲ್, ಸಿನಿಮಾಗಳಲ್ಲಿ ನಟಿಸಿ ಗೆದ್ದು, ಗಾಯಕರಾಗಿಯೂ ಹೆಸರು ಮಾಡಿ.. ಎಕ್ಸ್‍ಕ್ಯೂಸ್ ಮಿ ನಂತರ ಸ್ಟಾರ್ ಆಗಿದ್ದ ಸುನಿಲ್ ರಾವ್ ದಿಢೀರನೆ ನಾಪತ್ತೆಯಾಗಿಬಿಟ್ಟರು. ಮತ್ತೆ ಬಂದಿರೋದು ತುರ್ತು ನಿರ್ಗಮನ ಚಿತ್ರದ ಮೂಲಕ.
ಹಾಗೇನಿಲ್ಲ. ಸ್ವಲ್ಪ ಗ್ಯಾಪ್ ತೆಗೆದುಕೊಳ್ಳೋಣ ಎಂದುಕೊಂಡೆ. ಅದು ಐದಾರು ವರ್ಷವಾಗಿ.. 12 ವರ್ಷವೇ ಕಳೆದುಹೋಯ್ತು. ಇದರ ಮಧ್ಯೆ ಲೂಸ್ ಕನೆಕ್ಷನ್ ಅನ್ನೋ ವೆಬ್ ಸಿರೀಸ್ ಮೂಲಕ ನಟಿಸಿದೆ. ಈಗ ತುರ್ತು ನಿರ್ಗಮನ ಮೂಲಕ ಬೆಳ್ಳಿತೆರೆಗೆ ಬರುತ್ತಿದ್ದೇನೆ ಎನ್ನುತ್ತಾರೆ ಸುನಿಲ್ ರಾವ್.
ಈ 12 ವರ್ಷಗಳಲ್ಲಿ ಚಿತ್ರರಂಗವೂ ಸಾಕಷ್ಟು ಬದಲಾಗಿದೆ. ಮೊದಲೆಲ್ಲ ಹೆಚ್ಚು ಟೇಕ್ ತೆಗೆದುಕೊಂಡರೆ ರೀಲ್ ವೇಸ್ಟ್ ಆಗುತ್ತೆ ಅನ್ನೋ ಭಯವಿತ್ತು. ಈಗ ಆ ಭಯ ಇಲ್ಲ. ಟೆಕ್ನಾಲಜಿ ಅಪ್‍ಡೇಟ್ ಆಗಿದೆ. ಈಗ ಹೆಚ್ಚು ಹೆಚ್ಚು ಪ್ಯಾಷನ್ ಇರೋವ್ರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ನಮ್ಮ ಹೇಮಂತ್ ಕುಮಾರ್ ಕೂಡಾ ಅಂತಹವರಲ್ಲಿ ಒಬ್ಬರು ಎನ್ನುತ್ತಾರೆ ಸುನಿಲ್ ರಾವ್.
ಅಂದಹಾಗೆ ಇವತ್ತು ತುರ್ತು ನಿರ್ಗಮನ ಚಿತ್ರದ ಪ್ರೀಮಿಯರ್ ಶೋ ಇದೆ. ರಿಲೀಸ್ ಆಗುವುದಕ್ಕೂ ಮೊದಲೇ ಪತ್ರಕರ್ತರಿಗೂ ಸಿನಿಮಾ ತೋರಿಸುವ ಸಾಹಸ ಮಾಡುತ್ತಿದ್ದಾರೆ ಹೇಮಂತ್ ಕುಮಾರ್. ಕಾನ್ಫಿಡೆನ್ಸ್ ಅಂದ್ರೆ ಅದು.