` ಬಡ್ಡೀಸ್ ಪ್ರಚಾರಕ್ಕೆ ಕರೆಂಟ್ ಕಂಬ ಶಾಕ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಡ್ಡೀಸ್ ಪ್ರಚಾರಕ್ಕೆ ಕರೆಂಟ್ ಕಂಬ ಶಾಕ್
ಬಡ್ಡೀಸ್ ಪ್ರಚಾರಕ್ಕೆ ಕರೆಂಟ್ ಕಂಬ ಶಾಕ್

ಕಿರಣ್ ರಾಜ್ ಹೀರೋ ಆಗಿರುವ ಮೊದಲ ಚಿತ್ರ ಬಡ್ಡೀಸ್. ಈ ವಾರ ರಿಲೀಸ್ ಆಗುತ್ತಿರುವ ಚಿತ್ರತಂಡಕ್ಕೆ ಆಘಾತ ನೀಡಿರುವುದು ಕರೆಂಟ್ ಕಂಬ. ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಪ್ರಚಾರಕ್ಕಾಗಿಯೇ ವಿಶೇಷ ವಾಹನ ಸಿದ್ಧ ಮಾಡಿದ್ದು, ಜಿಲ್ಲೆ ಜಿಲ್ಲೆಗೂ ಭೇಟಿ ನೀಡುತ್ತಿದೆ. ಈ ವೇಳೆ ಬೆಳಗಾವಿಯಲ್ಲಿ ವಾಹನದ ಮೇಲೆ ಕರೆಂಟ್ ಕಂಬ ಬಿದ್ದಿದ್ದು ವಾಹನ ನಜ್ಜುಗುಜ್ಜಾಗಿದೆ.

ಕಾಲೇಜ್`ವೊಂದರಲ್ಲಿ ಪ್ರಚಾರ ಮುಗಿಸಿ ಬರುತ್ತಿರುವಾಗ ಟೀ ಕುಡಿಯಲೆಂದು ವಾಹನ ನಿಲ್ಲಿಸಿದ್ದೆವು. ಆಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಆ ವೇಳೆ ವಾಹನದಲ್ಲಿ ಯಾರೊಬ್ಬರೂ ಇರಲಿಲ್ಲ. ದೇವರು ದೊಡ್ಡವನು ಎಂದಿದ್ದಾರೆ ಕಿರಣ್ ರಾಜ್.

ಬಡ್ಡೀಸ್, ಸ್ನೇಹದ ಮಹತ್ವ ಸಾರುವ ಕಥೆಯುಳ್ಳ ಸಿನಿಮಾ. ಕಿರಣ್ ರಾಜ್ ಅವರಿಗೆ ಸಿರಿ ಪ್ರಹ್ಲಾದ್ ನಾಯಕಿಯಾಗಿ ನಟಿಸಿದ್ದಾರೆ. ಇದು ಗುರುತೇಜ್ ಶೆಟ್ಟಿ ನಿರ್ದೇಶನದ ಸಿನಿಮಾ.