` ಮ್ಯೂಸಿಕ್ ಡೈರೆಕ್ಟರ್ ಟು ಡೈರೆಕ್ಟರ್ : ಈಗ ಅರ್ಜುನ್ ಜನ್ಯ ಸರದಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಮ್ಯೂಸಿಕ್ ಡೈರೆಕ್ಟರ್ ಟು ಡೈರೆಕ್ಟರ್ : ಈಗ ಅರ್ಜುನ್ ಜನ್ಯ ಸರದಿ
Arjun Janya Image

ಸಂಗೀತ ನಿರ್ದೇಶನವೇ ಒಂದು ತಪಸ್ಸು. ಆ ತಪಸ್ಸಿನಲ್ಲಿ ಗೆದ್ದವರಿಗೆ ನಿರ್ದೇಶನವನ್ನೂ ಮಾಡುವ ಕನಸು ಮೊಳಕೆಯೊಡೆಯುವುದು ಹೊಸದೇನಲ್ಲ. ನಿರ್ದೇಶನ ಅದನ್ನೂ ಮೀರಿದ ಇನ್ನೊಂದು ವ್ರತ. ಈಗ ಸಂಗೀತ ನಿರ್ದೇಶನದಿಂದ ನಿರ್ದೇಶನಕ್ಕೆ ಹೊರಳುವ ಹಾದಿಯಲ್ಲಿದ್ದಾರೆ ಅರ್ಜುನ್ ಜನ್ಯಾ.

ಸಂಗೀತ ನಿರ್ದೇಶಕರು ನಿರ್ದೇಶಕರಾಗುವುದು ಹೊಸದೇನೂ ಅಲ್ಲ. ಈ ಹಿಂದೆ ವಿ.ಮನೋಹರ್, ಸಾಧು ಕೋಕಿಲ, ಹರಿಕೃಷ್ಣ ನಿರ್ದೇಶಕರಾಗಿದ್ದಾರೆ. ಗೆದ್ದಿದ್ದಾರೆ. ಸೋತೂ ಇದ್ದಾರೆ. ಈಗ ನಿರ್ದೇಶನದ ಸಾಹಸಕ್ಕೆ  ಕೈ ಹಾಕಿರುವ ಅರ್ಜುನ್ ಜನ್ಯಾ ಹೀರೋ ಆಗಿ ಶಿವಣ್ಣರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಕಥೆ ಏನು? ಗೊತ್ತಿಲ್ಲ. ಶಿವಣ್ಣ ಯೆಸ್ ಎಂದಿದ್ದಾರಾ? ಗೊತ್ತಿಲ್ಲ. ನಿರ್ಮಾಪಕರು ಯಾರು? ಗೊತ್ತಿಲ್ಲ. ಸದ್ಯಕ್ಕೆ ಸಿಕ್ಕಿರೋ ಸುದ್ದಿ ಇಷ್ಟೇ. ಶಿವಣ್ಣ ಶೆಡ್ಯೂಲ್ ನೋಡಿದರೆ ಈ ವರ್ಷ ಮತ್ತು ಮುಂದಿನ ವರ್ಷ ಶಿವಣ್ಣ ಕಾಲ್‍ಶೀಟ್ ಸಿಗೋ ಮಾತೇ ಇಲ್ಲ. ಯಾವಾಗ ಶುರುವಾಗುತ್ತೆ ಅನ್ನೋದನ್ನ ಅವರೇ ಹೇಳಬೇಕು.