` KGF Chapter 2 : ದಾಖಲೆಗಳ ಫೈನಲ್ ಲೆಕ್ಕ ಇದು - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
KGF Chapter 2 : ದಾಖಲೆಗಳ ಫೈನಲ್ ಲೆಕ್ಕ ಇದು
KGF Chapter 2 Movie Image

KGF Chapter 2 ಸೃಷ್ಟಿಸಿದ ಸಂಚಲನ, ದಾಖಲೆಗಳಿಗೆ  ಲೆಕ್ಕವೇ ಇಲ್ಲ. ರಾಕಿಭಾಯ್ ನ್ಯಾಷನಲ್ ಸ್ಟಾರ್ ಆಗಿದ್ದು ಇದೇ ಚಿತ್ರದಿಂದ. ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ನಟಿಸಿದ್ದ ಚಿತ್ರದ ಮೂಲಕ ಹೊಂಬಾಳೆ ದೇಶದ ನಂ.1 ಚಿತ್ರ ಸಂಸ್ಥೆಯಾಗಿದ್ದು ಈಗ ಇತಿಹಾಸ. ಪ್ರಶಾಂತ್ ನೀಲ್ ಈಗ ದೇಶದ ಟಾಪ್ ಡೈರೆಕ್ಟರ್ಗಳಲ್ಲಿ ಒಬ್ಬರು. ಚಿತ್ರ ರಿಲೀಸ್ ಆಗಿ ಈಗ ಒಟಿಟಿಗಳಲ್ಲಿಯೂ ಸಿಗುತ್ತಿದೆ. ಹೀಗಿರುವಾಗಲೇ ಬಾಲಿವುಡ್ ಒಂದು ಲೆಕ್ಕಾಚಾರ ಕೊಟ್ಟಿದೆ. ಇದು ಫೈನಲ್ ಲೆಕ್ಕವಂತೆ. ಈ ಲೆಕ್ಕದ ಪ್ರಕಾರ..

ಕರ್ನಾಟಕ ₹171.50 ಕೋಟಿ

ಆಂಧ್ರ/ ತೆಲಂಗಾಣ ₹150 ಕೋಟಿ

ತಮಿಳುನಾಡು ₹109.70 ಕೋಟಿ

ಕೇರಳ ₹66.10 ಕೋಟಿ

ಉತ್ತರ ಭಾರತ ₹494.30 ಕೋಟಿ

=======================

ಒಟ್ಟು ₹991.60 ಕೋಟಿ

ಇನ್ನು ವಿದೇಶಗಳ ಲೆಕ್ಕಾಚಾರಕ್ಕೆ ಬರುವುದಾದರೆ..

ಉತ್ತರ ಅಮೆರಿಕಾ $7.45 million

ಮಧ್ಯ ಪ್ರಾಚ್ಯ $8.13 million

ಆಸ್ಟೇಲಿಯಾ $2.53 million

ನ್ಯೂಜಿಲ್ಯಾಂಡ್ $0.43 million

ಮಲೇಷ್ಯಾ $2.45 million

ಸಿಂಗಾಪುರ $0.90 million

ನೇಪಾಳ $1.05 million

ಏಪ್ಯಾ $0.65 million

ಯುಕೆ- $1.46 million

ಯುರೋಪ್ $1.50 million

ಉಳಿದ ರಾಷ್ಟ್ರಗಳು $0.50 million

=================

ಒಟ್ಟು ಲೆಕ್ಕ ₹206.60 ಕೋಟಿ

ಈ ಎರಡನ್ನೂ ಒಟ್ಟು ಮಾಡಿದಾಗ ಬರುವ ಮೊತ್ತ 1200 ಕೋಟಿ

ಚಿತ್ರವನ್ನು ಥಿಯೇಟರುಗಳಲ್ಲಿ ನೋಡಿದವರ ಸಂಖ್ಯೆ ಐದೂವರೆ ಕೋಟಿ.