777 ಚಾರ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಥಿಯೇಟರುಗಳು ತುಂಬಿ ತುಳುಕುತ್ತಿವೆ. ರಕ್ಷಿತ್ ಶೆಟ್ಟಿ, ಚಾರ್ಲಿಯ ಆ್ಯಕ್ಟಿಂಗ್ ಮೋಡಿ ಮಾಡಿದೆ. ಆದರೆ.. ಇನ್ನೊಂದೆಡೆ ಮಳೆಗಾಲ. ಆಕಾಶವೇ ತೂತು ಬಿದ್ದಂತೆ ಮಳೆ ಸುರಿಯುತ್ತಿದೆ. ಈ ಮಳೆ ಚಾರ್ಲಿ ಸಿನಿಮಾ ನೋಡಲು ಬಂದವರನ್ನೂ ಬಿಟ್ಟಿಲ್ಲ.
ಬೆಂಗಳೂರಿನಲ್ಲಿ ರಾತ್ರಿ ಭಯಂಕರ ಮಳೆಯಾಗಿದೆ. ಎಂದಿನಂತೆ ತಗ್ಗಿನಲ್ಲಿ, ಚರಂಡಿಗಳಲ್ಲಿ ನೀರು ಧುಮ್ಮಿಕ್ಕಿ ಹರಿದಿದೆ. ಹಲವೆಡೆ ಅಪಾರ್ಟ್‍ಮೆಂಟುಗಳಿಗೂ ನೀರು ನುಗ್ಗಿದೆ. ಕೆ.ಆರ್.ಪುರಂನಲ್ಲಿರೋ ಶ್ರೀಕೃಷ್ಣ ಥಿಯೇಟರಿಗೂ ನೀರು ನುಗ್ಗಿದೆ. ನೀರು ನುಗ್ಗಿದ ರಭಸಕ್ಕೆ ಥಿಯೇಟರಿನ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಸಿನಿಮಾ ನೋಡಲು ಬಂದು ಬೈಕ್ ನಿಲ್ಲಿಸಿ ಹೋಗಿದ್ದವರಿಗೆ ಹೊರಗೆ ಬಂದಾಗ ಶಾಕ್. ಕಾಂಪೌಂಡ್ ಅಡಿಯಲ್ಲಿ ಸಿಲುಕಿದ್ದ 24 ಬೈಕ್‍ಗಳು ನಜ್ಜುಗುಜ್ಜಾಗಿವೆ.