ಇತ್ತೀಚೆಗಷ್ಟೇ ಬೊಜ್ಜು ಕರಗಿಸಲು ಹೋಗಿ ಸಾವಿಗೀಡಾದ ಚೇತನಾ ಸಾವು ಮರೆಯುವ ಮುನ್ನವೇ ಇನ್ನೊಂದು ಆಘಾತ ಇದು. ನಾಯಕಿಯಾಗುವ ಕನಸು ಕಂಡಿದ್ದ ಹುಡುಗಿಯ ಪಾಲಿಗೆ ದಂತ ಚಿಕಿತ್ಸೆ ವಿಲನ್ ಆಗಿದ್ದಾರೆ. ನಟಿಯ ಮುಖವೇ ವಿರೂಪಗೊಂಡಿದೆ. ಅದಕ್ಕೆ ಕಾರಣ ಡಾಕ್ಟರ್ ನೀಡಿದ ಚಿಕಿತ್ಸೆ ಎನ್ನವುದು ಆರೋಪ. ಈಗ ಮುಖ ವಿರೂಪಗೊಂಡು ದುಃಖಿಸುತ್ತಿರುವ ನಟಿ ಸ್ವಾತಿ. ಎಫ್ಐಆರ್, 6 ಟು 6 ಸೇರಿದಂತೆ ಹಲವು ಸಿನಿಮಾದಲ್ಲಿ ನಟಿಸಿರುವ ಸ್ವಾತಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿಯೂ ಹೆಸರು ಮಾಡಿದ್ದರು.
ಸ್ವಾತಿಯ ಆರೋಪವೇನು?
ಹಲ್ಲಿನ ಚಿಕಿತ್ಸೆಗಾಗಿ ಸ್ವಾತಿ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದಾರೆ. ರೂಟ್ ಕೆನಲ್ ಮಾಡಿಸಿಕೊಳ್ಳಿ ಅನ್ನೋ ಸಲಹೆ ಕೊಟ್ಟಿದ್ದಾರೆ ಆಸ್ಪತ್ರೆ ವೈದ್ಯರು. ಆದರೆ ಅನಸ್ತೇಷಿಯಾ ಕೊಡುವ ಬದಲು, ಸಾಲಿಸೈಲಿಕ್ ಆಸಿಡ್ ಕೊಟ್ಟಿದ್ದಾರೆ. ನಂತರ ಮುಖದ ಒಳಭಾಗ ಸುಟ್ಟು ಹೋಗಿದೆ. ಡೋಂಟ್ ವರಿ, ಇನ್ನೆರಡು ಗಂಟೆಯಲ್ಲಿ ಸರಿ ಹೋಗುತ್ತೆ ಎಂದ ವೈದ್ಯರು.. ನಂತರ 2 ದಿನ.. 4 ದಿನ.. ಸರಿ ಹೋಗುತ್ತೆ ಎಂದು ಭರವಸೆ ನೀಡುತ್ತಲೇ ಕಾಲ ಕಳೆದಿದ್ದಾರೆ. 20 ದಿನ ಕಳೆದರೂ ಮುಖದ ಊತ ಇಳಿಯದೇ ಹೋದಾಗ ವೈದ್ಯರಿಗೆ ಕರೆ ಮಾಡಿದರೆ ವೈದ್ಯರು ಬೆಂಗಳೂರಿನಲ್ಲೇ ಇಲ್ಲ. ಮುಂಬೈನಲ್ಲಿದ್ದಾರೆ ಅನ್ನೋ ಉತ್ತರ ಸಿಕ್ಕಿದೆ.
ವೈದ್ಯರು ಹೇಳೋದೇನು?
ನಮ್ಮದೇನೂ ತಪ್ಪಿಲ್ಲ. ಅವರ ಚರ್ಮವೇ ಅತ್ಯಂತ ಸೂಕ್ಷ್ಮವಾಗಿದ್ದು ಹೀಗಾಗಿದೆ ಎಂದಿದ್ದಾರೆ ವೈದ್ಯರು.
ಸದ್ಯಕ್ಕೆ ಸ್ವಾತಿ ಬೇರೆ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ಪಡೆಯುತ್ತಿದ್ದಾರೆ.