ಬಹುಶಃ ಸುಧಾರಾಣಿ ಇಷ್ಟೊಂದು ಎಕ್ಸೈಟ್ ಆಗಿ ಒಂದು ಸಿನಿಮಾದ ಬಗ್ಗೆ.. ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದು ಅವರ 3 ದಶಕಗಳ ಹಿಸ್ಟರಿಯಲ್ಲಿ ಇದೇ ಮೊದಲಿರಬೇಕು. ಸುನಿಲ್ ರಾವ್ ಅವರಿಗೆ ಒಂದು ದೊಡ್ಡ ಗ್ಯಾಪ್ ನಂತರ ಮತ್ತೊಮ್ಮೆ ತೆರೆ ಮೇಲೆ ಬರುವ ಚಾನ್ಸ್ ಸಿಕ್ಕಿದೆ. ರಾಜ್ ಬಿ.ಶೆಟ್ಟಿ ಇದ್ದಾರೆ. ಚಿತ್ರದ ಮೇಕಿಂಗ್, ಟ್ರೇಲರ್ ನೋಡಿದವರಿಗೆ ಥಟ್ಟನೆ ಅನ್ನಿಸೋದು ಒಂದೇ.. ಇದು ಮಾಮೂಲಿ ಸಿನಿಮಾ ಅಲ್ವೇ ಅಲ್ಲ. ಹೇಮಂತ್ ಕುಮಾರ್ ವಿಭಿನ್ನತೆಯನ್ನೆಲ್ಲ ಚಿತ್ರದ ಕಾನ್ಸೆಪ್ಟ್‍ನಲ್ಲಿ ತುಂಬಿ ತರುತ್ತಿದ್ದಾರೆ.
ಸತ್ತವನಿಗೆ ಮತ್ತೊಮ್ಮೆ ಬದುಕುವ ಅವಕಾಶ ಸಿಕ್ಕರೆ.. ಅದೂ ಸ್ವಲ್ಪವೇ ಸ್ವಲ್ಪ ಕಾಲ.. ಆದರೆ ಅವನಿಗೆ ಮತ್ತೊಮ್ಮೆ ಇಡೀ ಲೈಫ್ ಬದುಕುವ ಆಸೆ ಹುಟ್ಟಿಬಿಟ್ಟರೆ.. ಅದಕ್ಕಾಗಿ ಅವನು ಏನೇನೆಲ್ಲ ಮಾಡಬಹುದು.. ಸಿನಿಮಾ ಇಂಟ್ರೆಸ್ಟಿಂಗ್ ಅನ್ನಿಸೋದೇ ಈ ರೀತಿಯ ಕಾನ್ಸೆಪ್ಟ್‍ನಲ್ಲಿ.
ಇದೊಂದು ಸೈ-ಫೈ ಅಂದ್ರೆ ಸೈಂಟಿಫಿಕ್ ಫಿಕ್ಷನ್ ಮೂವಿ. ಕನ್ನಡಕ್ಕೆ ಇದು ಹೊಸದು ಎನ್ನುತ್ತಿದ್ದಾರೆ ಡೈರೆಕ್ಟರ್ ಹೇಮಂತ್ ಕುಮಾರ್. ಸುಧಾರಾಣಿ ನರ್ಸ್ ಪಾತ್ರದಲ್ಲಿ, ರಾಜ್ ಬಿ.ಶೆಟ್ಟಿ ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಜೂನ್ 24ಕ್ಕೆ ರಿಲೀಸ್.