777 ಚಾರ್ಲಿ. ರಿಲೀಸ್ ಆದ ನಂತರ ಸಂಚಲನ ಸೃಷ್ಟಿಸಿದ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಆದ ಚಿತ್ರ. ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದ 777 ಚಾರ್ಲಿ, ಉಳಿದ ಭಾಷೆಗಳಲ್ಲಿ ನಿಧಾನವಾಗಿ ಬೇರೂರುತ್ತಿದೆ.
ಕನ್ನಡದಲ್ಲಿ ಮೊದಲ ವಾರ ಇದ್ದ ಚಿತ್ರಮಂದಿರ ಮತ್ತು ಸ್ಕ್ರೀನ್‍ಗಳ ಸಂಖ್ಯೆ 2ನೇ ವಾರಕ್ಕೆ ಇನ್ನಷ್ಟು ಹೆಚ್ಚಿದೆ. ಸಕ್ಸಸ್ ಇರೋದೇ ಅಲ್ಲಿ. ಇನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ಚಿತ್ರಕ್ಕೆ ನಿರೀಕ್ಷೆಯಂತೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಎರಡೂ ಭಾಷೆಗಳಲ್ಲಿ ಚಿತ್ರದ ಕಲೆಕ್ಷನ್ ಎರಡು ಕೋಟಿ ದಾಡಿ ಮುನ್ನುಗ್ಗುತ್ತಿದೆ. ತಮಿಳಿನಲ್ಲಿ ನಿಧಾನಕ್ಕೆ ಕಚ್ಚಿಕೊಳ್ಳುತ್ತಿದೆ. ಕಲೆಕ್ಷನ್ ಒಂದು ಕೋಟಿ ದಾಟಿದೆ. ಹಿಂದಿಯಲ್ಲಿ ಮೆಟ್ರೋ ಸಿಟಿಗಳಲ್ಲಿ ಚಿತ್ರಕ್ಕೆ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ.
ಬೆಂಗಳೂರಿನಲ್ಲಿ ಈಗಲೂ 400 ಸ್ಕ್ರೀನ್‍ಗಳಲ್ಲಿ 777 ಚಾರ್ಲಿ ಇದೆ. ಚಾರ್ಲಿ ಹೀರೋ ಆಗಿರೋ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯೂ ನಾಯಕ ಎಂದರೆ ತಪ್ಪಾಗಲಿಕ್ಕಿಲ್ಲ. ಕಿರಣ್ ರಾಜ್ ನಿರ್ದೇಶನದ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದ್ದು, ಒಟ್ಟಾರೆ ಕಲೆಕ್ಷನ್ 40 ಕೋಟಿ ದಾಟಿದೆ. 50 ಕೋಟಿಯ ಸಮೀಪದಲ್ಲಿದೆ. ಈ ವೀಕೆಂಡ್‍ನಲ್ಲಿ 50 ಕೋಟಿಯನ್ನು ದಾಟಿ ಮುಂದೆ ಹೋಗುವ ಎಲ್ಲ ಸಾಧ್ಯತೆಗಳೂ ಇವೆ.