ಗುರು ಶಿಷ್ಯರು. ಶರಣ್ ಹೀರೋ ಆಗಿರೋ ಸಿನಿಮಾ. ಶರಣ್ ಹೀರೋ ಅಷ್ಟೇ ಅಲ್ಲ, ನಿರ್ಮಾಪಕರೂ ಹೌದು. ನಿರ್ಮಾಣದಲ್ಲಿ ಶರಣ್ ಜೊತೆ ತರುಣ್ ಸುಧೀರ್ ಕೂಡಾ ಕೈಜೋಡಿಸಿದ್ದಾರೆ. ಜಂಟಲ್‍ಮನ್ ಅನ್ನೋ ವಿಭಿನ್ನ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದ ಜಡೇಶ್ ಕೆ.ಹಂಪಿ ಈ ಚಿತ್ರಕ್ಕೆ ಡೈರೆಕ್ಟರ್. ನಿಶ್ವಿಕಾ ನಾಯ್ಡು ಹೀರೋಯಿನ್ ಆಗಿರೋ ಚಿತ್ರದಲ್ಲಿ ಶರಣ್ ಪಿಟಿ ಮೇಷ್ಟ್ರು ಪಾತ್ರ ಮಾಡುತ್ತಿದ್ದಾರೆ.
ಈಗ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು.. ಎಂದು ಶರಣ್ ಬಗ್ಗೆ ನಿಶ್ವಿಕಾ ಕನವರಿಸೋ ಹಾಡಿದು. ಪುನೀತ್ ಆರ್ಯ ಬರೆದಿರುವ ಹಾಡಿಗೆ ಧ್ವನಿ ನೀಡಿರುವುದು ಹರ್ಷಿಕಾ ದೇವಾಂತ್ ಮತ್ತು ವಿಜಯ್ ಪ್ರಕಾಶ್. ತರುಣ್ ಕ್ರಿಯೇಟಿವ್ ಆಗಿರೋದ್ರಿಂದ.. ಅವರು ಕ್ರಿಯೇಟಿವ್ ಹೆಡ್ ಆಗಿದ್ದ ಚಿತ್ರಗಳು ಹಿಟ್ ಆಗಿರೋದ್ರಿಂದ ಈ ಚಿತ್ರದ ಮೇಲೆಯೂ ಭಾರಿ ನಿರೀಕ್ಷೆಗಳಿವೆ.
ಆಂದಹಾಗೆ ಈ ಹಾಡು ರಿಲೀಸ್ ಮಾಡಿದ್ದು ಹಳ್ಳಿಮೇಷ್ಟ್ರು ರವಿಚಂದ್ರನ್. ಚಿತ್ರದ ಕಾನ್ಸೆಪ್ಟ್ ನನಗೆ ಇಷ್ಟವಾಯಿತು ಎಂದು ಓಪನ್ ಆಗಿ ಹೇಳಿ ತರುಣ್ ಮತ್ತು ಶರಣ್ ಬೆನ್ನು ತಟ್ಟಿದರು ರವಿಚಂದ್ರನ್. ಜೊತೆಗೆ ಲವ್ ಸೀನ್ಸ್‍ಗಳಲ್ಲಿ ಹೀರೋಗೆ ಹೀರೋಯಿನ್ ಮುಟ್ಟೋಕಾದ್ರೂ ಬಿಡಿ ಎಂದು ನಿರ್ದೇಶಕರ ಕಾಲೆಳೆದರು. ಅಂದಹಾಗೆ ಹಾಡು ಬೊಂಬಾಟ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತದಂತೆಯೇ.. ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಹಿಟ್ ಮ್ಯೂಸಿಕ್ ಕೊಟ್ಟಿರುವ ಅಜನೀಶ್ ಮತ್ತೊಮ್ಮೆ ಮೆಲೋಡಿ ಡಿಂಡಿಮ ಮೊಳಗಿಸಿದ್ದಾರೆ.