ಅಧ್ಯಕ್ಷ ಅಂದ್ರೆ ಶರಣ್ ಹೇಗೆ ನೆನಪಾಗ್ತಾರೋ.. ಉಪಾಧ್ಯಕ್ಷ ಅಂದ್ರೆ ಚಿಕ್ಕಣ್ಣ ನೆನಪಾಗ್ತಾರೆ. ಕಾಮಿಡಿ ಪಾತ್ರಗಳ ಮೂಲಕ ಮನ ಗೆದ್ದಿದ್ದ ಚಿಕ್ಕಣ್ಣ ಹೀರೋ ಆಗಿರೋ ಸಿನಿಮಾ ಉಪಾಧ್ಯಕ್ಷ. ಮುಹೂರ್ತ ನೆರವೇರಿಸಿಕೊಂಡಿದ್ದ ಸಿನಿಮಾ ಶೂಟಿಂಗ್ ಶುರು ಮಾಡಿರಲಿಲ್ಲ.
ಉಪಾಪತಿ ಶ್ರೀನಿವಾಸ್‍ರಂತಹ ಸ್ಟಾರ್ ನಿರ್ಮಾಪಕ ಪ್ರೊಡ್ಯೂಸ್ ಮಾಡ್ತಿರೋ ಸಿನಿಮಾ ಉಪಾಧ್ಯಕ್ಷ. 2020ರ ಅಕ್ಟೋಬರ್‍ನಲ್ಲಿ ಘೋಷಣೆಯಾಗಿತ್ತು. ಈಗ ಮುಹೂರ್ತ ನೆರವೇರಿಸಿಕೊಂಡಿದೆ. ಉಪಾಧ್ಯಕ್ಷ ಶೂಟಿಂಗ್ ಈಗ ಶುರುವಾಗಿದೆ.
ಚಂದ್ರಮೋಹನ್ ನಿರ್ದೇಶನ ಮಾಡುತ್ತಿರೋ ಸಿನಿಮಾದಲ್ಲಿ ಕಾಮಿಡಿ ಸಬ್ಜೆಕ್ಟೇ ಇರಲಿದೆ ಅನ್ನೋದ್ರಲ್ಲಿ ಡೌಟೇನಿಲ್ಲ.