` ವಿಕ್ರಾಂತ್ ರೋಣ ನಿರ್ಮಾಪಕ ಜಾಕ್ ಮಂಜುಗೆ ಏನಾಯ್ತು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವಿಕ್ರಾಂತ್ ರೋಣ ನಿರ್ಮಾಪಕ ಜಾಕ್ ಮಂಜುಗೆ ಏನಾಯ್ತು?
Jack manju Image

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಲ್ಲೊಂದಾದ ವಿಕ್ರಾಂತ್ ರೋಣ ಪ್ರೇಕ್ಷಕರ ಎದುರು ಬರೋಕೆ ಇನ್ನೊಂದೂವರೆ ತಿಂಗಳು ಬಾಕಿ.. ಚಿತ್ರ ಈಗಾಗಲೇ ಸೆನ್ಸೇಷನ್ ಸೃಷ್ಟಿಸಿದೆ. ಆ ಸಂಚಲವನ್ನು ಇನ್ನಷ್ಟು ಪೀಕ್‍ಗೆ ತೆಗೆದುಕೊಂಡು ಹೋಗಬೇಕಿರುವ ಈ ವೇಳೆಯಲ್ಲಿ ವಿಕ್ರಾಂತ್ ರೋಣ ನಿರ್ಮಾಪಕ ಜಾಕ್ ಮಂಜು ಆಸ್ಪತ್ರೆಗೆ ಸೇರಿದ್ದಾರೆ. ಡಿಸ್‍ಚಾರ್ಜ್ ಕೂಡಾ ಆಗಿದ್ದಾರೆ. ಆಗಿದ್ದಿಷ್ಟು.

ಸುಮಾರು 20 ದಿನಗಳ ಹಿಂದೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಮಂಜು ಎಡವಿ ಬಿದ್ದಿದ್ದರು. ಸ್ವಲ್ಪ ಪೆಟ್ಟಾಗಿತ್ತು. ನಂತರ ಅದನ್ನು ಮಂಜು ನಿರ್ಲಕ್ಷಿಸಿದ್ದರು. ಆದರೆ, ಎಡವಿ ಬಿದ್ದಿದ್ದ ಜಾಗದಲ್ಲಿ ಊತ ಕಾಣಿಸಿಕೊಂಡಿತ್ತು. ರಕ್ತ ಹೆಪ್ಪುಗಟ್ಟಿತ್ತು. ಹೀಗಾಗಿ ಶುಕ್ರವಾರ ಬನ್ನೇರುಘಟ್ಟ ಬಳಿ ಇರೋ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈಗ ಡಿಸ್‍ಚಾರ್ಜ್ ಕೂಡಾ ಆಗಿದ್ದಾರೆ.

ನನ್ನ ಗೆಳೆಯ, ಸಹೋದರ ಆರಾಮಾಗಿದ್ದಾನೆ. ಇದೊಂದು ಮುಂಜಾಗ್ರತಾ ಚಿಕಿತ್ಸೆ ಅಷ್ಟೆ. ಮಂಜು ಮಲಗಿದ್ದಾಗ ತೆಗೆದುಕೊಂಡಿರೋ ಫೋಟೋ ಗೊಂದಲ ಸೃಷ್ಟಿಸಿದೆ. ಲೀಕ್ ಅದ ಕೆಲವು ಫೋಟೋಗಳು ಮಂಜುಗೆ ಎನೋ ಸೀರಿಯಸ್ ಆಗಿದೆ ಅನ್ನೋ ರೀತಿ ಚಿತ್ರಣ ಕೊಟ್ಟಿವೆ. ಹಾಗೇನಿಲ್ಲ. ಮಂಜು ಚೆನ್ನಾಗಿದ್ದಾರೆ ಎಂದು ಸ್ವತಃ ಸುದೀಪ್ ಟ್ವೀಟ್ ಮಾಡಿದ್ದಾರೆ.