ಒಂದು ಕಡೆ 777 ಚಾರ್ಲಿ ಸೂಪರ್ ಹಿಟ್ ಆಗಿದೆ. ಸ್ಟಾರ್ ಸಿನಿಮಾವೊಂದು ಹಿಟ್ ಆದಾಗ ಉಳಿದ ಚಿತ್ರಗಳಿಗೆ ಅದು ಕೊಡುವ ಹುಮ್ಮಸ್ಸೇ ಬೇರೆ. ಅದರಲ್ಲೂ ಚಾರ್ಲಿ ಹೀರೋ ಬೇಸ್ ಇರೋ ಕಮರ್ಷಿಯಲ್ ಎಂಟರ್‍ಟೈನರ್ ಅಲ್ಲ. ಪಕ್ಕಾ ಕಂಟೆಂಟ್ ಸಿನಿಮಾ. ಚಾರ್ಲಿ ಥಿಯೇಟರುಗಳಲ್ಲಿ ಕಚ್ಚಿಕೊಂಡಿರುವ ಹೊತ್ತಿನಲ್ಲೇ ಈ ವಾರ 4 ಸಿನಿಮಾ ರಿಲೀಸ್ ಆಗುತ್ತಿವೆ.
ತ್ರಿವಿಕ್ರಮ : ವಿಕ್ರಂ ರವಿಚಂದ್ರನ್ ಮೊದಲ ಸಿನಿಮಾ ತ್ರಿವಿಕ್ರಮ. ಸಹನಾ ಮೂರ್ತಿ ನಿರ್ದೇಶನದ ಸಿನಿಮಾ ಇದು. ಪಕ್ಕಾ ಲವ್ ಸ್ಟೋರಿ. ವಿಕ್ರಂ ಎದುರು ಆಕಾಂಕ್ಷಾ ಶರ್ಮಾ ಹೀರೋಯಿನ್ ಆಗಿದ್ದಾರೆ.
ಹರಿಕಥೆ ಅಲ್ಲ ಗಿರಿಕಥೆ : ಇದು ರಿಷಬ್ ಶೆಟ್ಟಿ ಹೀರೋ ಆಗಿರುವ ಸಿನಿಮಾ. ಗರುಡ ಗಮನದ ನಂತರ ಮತ್ತೊಮ್ಮೆ ತೆರೆ ಮೇಲೆ ಬರುತ್ತಿದ್ದಾರೆ. ಹೀರೋ ಆಗಿ. ಇದೊಂದು ಕಂಪ್ಲೀಟ್ ಎಂಟರ್‍ಟೈನರ್ ಎಂದು ರಿಷಬ್ ಶೆಟ್ಟಿ ಹೇಳಿಬಿಟ್ಟಿದ್ದಾರೆ. ರಿಲೀಸ್ ಆಗಿರುವ ಹಾಡು ಮತ್ತು ಟ್ರೇಲರ್ ಎರಡೂ ಇದೇ ರೀತಿ ಇವೆ.
ತುರ್ತು ನಿರ್ಗಮನ : ಚಿತ್ರದ ಕಥೆ ಮತ್ತು ಕಂಟೆಂಟ್ ಅಷ್ಟೇ ಅಲ್ಲ, ನಿರೂಪಣೆಯೂ ಕೊಡ ಹೊಸದಾಗಿದೆ ಎನ್ನುವ ಫೀಲ್ ಕೊಡುತ್ತಿದೆ ಚಿತ್ರದ ಟ್ರೇಲರ್. ತಮ್ಮ 36 ವರ್ಷಗಳ ಸಿನಿ ಲೈಫಲ್ಲಿ ಇಂತಾ ಸಿನಿಮಾ ಮಾಡಿಲ್ಲ ಅನ್ನೋ ಕಾಂಪ್ಲಿಮೆಂಟ್ ಕೊಟ್ಟಿರೋದು ಸುಧಾರಾಣಿ. ಸುನಿಲ್ ರಾವ್ ರಿಟನ್ರ್ಸ್ ಅನ್ನೋದು ಚಿತ್ರದ ಇನ್ನೊಂದು ಹೈಲೈಟ್.
ಬುಡ್ಡೀಸ್ : ಇದು ಒಂದು ರೀತಿ ಹೊಸಬರ ಸಿನಿಮಾ. ಹಾಗಂತ ಸಂಪೂರ್ಣ ಹೊಸಬರೂ ಅಲ್ಲ. ಹೀರೋ ಕಿರಣ್ ರಾಜ್ ಕನ್ನಡತಿ ಧಾರಾವಾಹಿಯ ಮೂಲಕ ಗೊತ್ತು. ನಾಯಕಿ ಸಿರಿ ಪ್ರಹ್ಲಾದ್ ಈಗಾಗಲೇ ಒಂದು ಶಿಕಾರಿಯ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ. ಗುರುತೇಜ್ ಶೆಟ್ಟಿ ಚಿತ್ರದ ನಿರ್ದೇಶಕ. ಸ್ನೇಹಕ್ಕೆ ಸಾವಿಲ್ಲ ಅಣ್ತಮ್ಮ ಅನ್ನೋ ಟ್ಯಾಗ್‍ಲೈನಿನಲ್ಲೇ ಇಡೀ ಚಿತ್ರದ ಬಗ್ಗೆ ಒಂದು ಕಲ್ಪನೆ ಮಾಡಿಕೊಳ್ಳಬಹುದು.