ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ವಾನ ಪ್ರಿಯರು. ಅವರ ಮನೆಯಲ್ಲಿ ಸಾಕಿದ್ದ ನಾಯಿ ಮೃತಪಟ್ಟಾಗ ಅವರು ಮಗುವನ್ನೇ ಕಳೆದುಕೊಂಡವರಂತೆ ಕಣ್ಣೀರಿಟ್ಟಿದ್ದನ್ನು ಕರ್ನಾಟಕ ನೋಡಿದೆ. ಇದೇ ಪ್ರೀತಿಯಿಂದ 777 ಚಾರ್ಲಿ ನೋಡಿದ್ದಾರೆ ಸಿಎಂ ಬೊಮ್ಮಾಯಿ. ಬೊಮ್ಮಾಯಿ ಜೊತೆ ಸಚಿವರಾದ ಆರ್.ಅಶೋಕ್, ಡಿ.ಸುಧಾಕರ್, ಬಿ.ಸಿ.ನಾಗೇಶ್, ಶಾಸಕ ರಘುಪತಿ ಭಟ್ ಸೇರಿದಂತೆ ಹಲವರು ಸಿನಿಮಾ ನೋಡಿದರು.
ನನಗೆ ನಾಯಿಗಳೆಂದರೆ ಪ್ರೀತಿ. ನನ್ನ ಮನೆಯಲ್ಲೀಗ ದಿಯಾ ಅನ್ನೋ ಹೆಸರಿನ ನಾಯಿ ಇದೆ. ಸಿನಿಮಾದಲ್ಲಿ ಚಾರ್ಲಿ ಹೇಗೆ ಅಪ್ಪಿಕೊಳ್ಳುತ್ತದೋ.. ನಾನು ಮನೆಗೆ ಹೋದಾಗ ನನ್ನ ದಿಯಾ ಕೂಡಾ ಹಾಗೆಯೇ ಅಪ್ಪಿಕೊಳ್ಳುತ್ತದೆ ಎಂದರು ಬೊಮ್ಮಾಯಿ. ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಕರೆಯನ್ನೂ ಕೊಟ್ಟರು. ನಿರ್ದೇಶಕ ಕಿರಣ್ ರಾಜ್, ರಕ್ಷಿತ್ ಶೆಟ್ಟಿಯವರನ್ನು ಬಾಯ್ತುಂಬಾ ಹೊಗಳಿದರು.