ಗುಣರಂಜನ್ ಶೆಟ್ಟಿ. ಇವರು ಅನುಷ್ಕಾ ಶೆಟ್ಟಿ ಅವರ ಅಣ್ಣ. ಉದ್ಯಮಿ. ಈ ಹಿಂದೆ ಜಯ ಕರ್ನಾಟಕ ಸಂಘಟನೆಯಲ್ಲಿಯೂ ಇದ್ದವರು. ಮುತ್ತಪ್ಪ ರೈ ಜೊತೆ ಆಪ್ತರಾಗಿದ್ದವರು. ಮುತ್ತಪ್ಪ ರೈ ನಿಧನದ ನಂತರ ಸಂಘಟನೆ ತೊರೆದಿದ್ದರು. ಇವರ ಹತ್ಯೆಗೆ ಮುತ್ತಪ್ಪ ರೈ ಅವರ ಅಕ್ಕನ ಮಗ ಮನ್ವಿತ್ ರೈ ಸಂಚು ರೂಪಿಸಿದ್ದಾರೆ ಎನ್ನುವುದು ಆರೋಪ.
ನನಗೆ ಗೊತ್ತಿಲ್ಲ. ನನಗೆ ಭೂಗತ ಜಗತ್ತಿನ ಸಂಪರ್ಕವೂ ಇಲ್ಲ. ನನ್ನ ಮೇಲೆ ಒಂದು ಎಫ್‍ಐಆರ್ ಕೂಡಾ ಇಲ್ಲ. ಗುಣರಂಜನ್ ಶೆಟ್ಟಿಯವರಿಗೂ ಸಂಘಟನೆಯಲ್ಲಾಗಲೀ, ಉದ್ಯಮದಲ್ಲಾಗಲೀ ಶತ್ರುಗಳಿಲ್ಲ. ನನ್ನ ಹೆಸರು ಏಕೆ ಬಂತೋ ಗೊತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ ಮನ್ವಿತ್ ರೈ.
ಈ ಹಿಂದೆ ರಾಕೇಶ್ ಮಲ್ಲಿ ಎಂಬುವವರು ಮನ್ವಿತ್ ರೈ ವಿರುದ್ಧ ಆರೋಪ ಮಾಡಿದ್ದರು. ಆಗಲೂ ಮನ್ವಿತ್ ರೈ ನಿರಾಕರಿಸಿದ್ದರು.
ನನಗೂ ಪೊಲೀಸರು ಮತ್ತು ಮಾಧ್ಯಮಗಳಿಂದ ವಿಷಯ ಗೊತ್ತಾಗಿದೆ. ಅಧಿಕೃತವಾಗಿ ದೂರು ನೀಡಿದ್ದಾರೆ ಎಂದಿದ್ದಾರೆ ಗುಣರಂಜನ್ ಶೆಟ್ಟಿ.