` ಪೊಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ
Charlie 777 Image

777 ಚಾರ್ಲಿ ಸಿನಿಮಾ ನೋಡಿ ಹೊರಗೆ ಬರುವವರ ಕಣ್ಣು ಒದ್ದೆಯಾಗುತ್ತಿದೆ. ಒಂದು ಭಾವುಕತೆ ಆವರಿಸಿಕೊಳ್ಳುತ್ತದೆ. ಕೆಲವರು ಬಿಕ್ಕಳಿಸುತ್ತಾರೆ. ಒಂದು ಕಾಲದಲ್ಲಿ ತಾಯಿ, ತವರು, ತಂಗಿ ಸೆಂಟಿಮೆಂಟ್ ಚಿತ್ರಗಳೇ ಮೆರೆಯುತ್ತಿದ್ದ ಕಾಲದಲ್ಲಿ ಇಂಥಾದ್ದೊಂದು ಕಣ್ಣೀರ ಧಾರೆ ಹರಿದಿತ್ತು. ಈಗ ಒಂದು ನಾಯಿಯ ಕಥೆ ಕಣ್ಣೀರು ತರಿಸುತ್ತಿರುವುದು ವಿಶೇಷ. 777 ಚಾರ್ಲಿ ಗೆದ್ದಿದ್ದಾಗಿದೆ.

ಮಂಗಳೂರು ಪೊಲೀಸರು ತಮ್ಮ ಶ್ವಾನದಳಕ್ಕೆ ಸೇರಿದ ನಾಯಿಗೆ ಚಾರ್ಲಿ ಎಂದೇ ನಾಮಕರಣ ಮಾಡಿದ್ದಾರೆ. ಸಿನಿಮಾದಲ್ಲಿ ಚಾರ್ಲಿಯಾಗಿ ನಟಿಸಿರುವವಳು ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿ. ಪೊಲೀಸರ ಬಳಿ ಸೇರಿದ ಈ ನಾಯಿಯೂ ಅಷ್ಟೆ, ಅದೇ ತಳಿಯದ್ದು. ಬಂಟ್ವಾಳದಿಂದ ತರಿಸಿರುವ ನಾಯಿ. 20 ಸಾವಿರ ಕೊಟ್ಟು ಈ ನಾಯಿ ಖರೀದಿಸಿದ್ದಾರಂತೆ. ಇನ್ನೊಂದಾರು ತಿಂಗಳ ನಂತರ ತರಬೇತಿ ಶುರು ಮಾಡಲಿದ್ದಾರೆ. ಈ ನಾಯಿಗೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಬಾಂಬ್ ಪತ್ತೆ ಹಚ್ಚುವ ತರಬೇತಿ ನೀಡಲಿದ್ದಾರೆ ಪೊಲೀಸರು.

ಅಂದಹಾಗೆ ಇದೆಲ್ಲದರ ಮಧ್ಯೆ ಬಾಕ್ಸಾಫೀಸ್‍ನಲ್ಲೂ ಭರ್ಜರಿ ಸದ್ದು ಮಾಡಿದೆ 777 ಚಾರ್ಲಿ. ಎಲ್ಲ ಕಡೆಯೂ ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಹಾಗೂ ತಮ್ಮ ಪಾತ್ರಕ್ಕೆ ಸಿಕ್ಕ ರಿಯಾಕ್ಷನ್ಸ್ ಬಗ್ಗೆ ನಟ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದರು. ಈಗ ನಿರ್ಮಾಪಕ ರಕ್ಷಿತ್ ಶೆಟ್ಟಿಯೂ ಖುಷಿಯಾಗಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಓಪನಿಂಗ್ ಅದಕ್ಕೆ ಕಾರಣ. ಏಕೆಂದರೆ ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಕಿರಣ್ ರಾಜ್ ನಿರ್ದೇಶನದ ಸಿನಿಮಾ ಬೇರೆಯದೇ ಜಾನರ್ ಸ್ಟೋರಿ. ಹೀಗಾಗಿ.. ಹೊಸತನದ ಪ್ರಯೋಗ ಕೂಡಾ ಒಳ್ಳೆಯ ಕಲೆಕ್ಷನ್ ಮಾಡಿರುವುದು ಸಹಜವಾಗಿಯೇ ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಖುಷಿ ಕೊಟ್ಟಿದೆ.