` ವೈಯಕ್ತಿಕ ನಿಂದನೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ವೈಯಕ್ತಿಕ ನಿಂದನೆ : ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ
Ramya Image

ದಿವ್ಯ ಸ್ಪಂದನಾ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಟಿ ರಮ್ಯಾ ತಮ್ಮನ್ನು ಟೀಕಿಸುವವರನ್ನು ಯಾವತ್ತೂ ಸುಮ್ಮನೆ ಬಿಡುವವರಲ್ಲ. ಕೆಣಕಿದವರಿಗೆ ಉತ್ತರ ಕೊಟ್ಟೇ ಮುಂದೆ ಹೋಗುವ ಜಾಯಮಾನ ಅವರದ್ದು. ಘಟಾನುಘಟಿ ನಾಯಕರನ್ನೂ ಬಿಟ್ಟವರಲ್ಲ. ಅಂತಾದ್ದರಲ್ಲಿ ವ್ಯಕ್ತಿಯೊಬ್ಬ ರಮ್ಯಾ ಅವರನ್ನು ಬಾಯಿಗೆ ಬಂದಂತೆ ನಿಂದಿಸಿದ್ದಾನೆ.

ಇನ್‍ಸ್ಟಾಗ್ರಾಮ್ ಪೇಜಿನಲ್ಲಿ ರಮ್ಯಾ ಇತ್ತೀಚೆಗೆ ರಕ್ಷಿತ್ ಶೆಟ್ಟಿಯವರ 777 ಚಾರ್ಲಿ ಚಿತ್ರದ ಹೊಗಳಿ ವಿಡಿಯೋ ಹಾಕಿದ್ದರು. ಆ ವಿಡಿಯೋದ ಕಮೆಂಟ್ ಬಾಕ್ಸ್‍ಗೆ ಬಂದ ವ್ಯಕ್ತಿಯೊಬ್ಬ ರಮ್ಯಾ ಅವರ ವೈಯಕ್ತಿಕ ನಿಂದನೆ ಮಾಡಿದ್ದಾನೆ. ಈ ಕುರಿತು ಕಮಿಷನರ್ ಪ್ರತಾಪ್ ರೆಡ್ಡಿಯವರನ್ನು ಭೇಟಿ ಮಾಡಿದ್ದ ರಮ್ಯಾ, ನಂತರ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.