ಗೋದ್ರಾ. ನೀನಾಸಂ ಸತೀಶ್ ನಟಿಸಿರುವ ಸಿನಿಮಾ. ಸತೀಶ್ ಜೊತೆಗೆ ಶ್ರದ್ಧಾ ಶ್ರೀನಾಥ್, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್, ರಕ್ಷಾ ಸೋಮಶೇಖರ್, ಸೋನು ಗೌಡ ಮೊದಲಾದವರ ನಟಿಸಿರೋ ಸಿನಿಮಾ. ಸಿನಿಮಾದ ಟೈಟಲ್ ಬದಲಿಸಲು ಚಿತ್ರತಂಡ ನಿರ್ಧರಿಸಿದೆ.
ಆಕ್ಷೇಪ ಏಕೆ?
ಗೋದ್ರಾ ಎಂದೊಡನೆ ಗುಜರಾತ್‍ನಲ್ಲಿ ನಡೆದಿದ್ದ ಕರಸೇವಕರ ಹತ್ಯಾಕಾಂಡ ನೆನಪಿಗೆ ಬರುತ್ತೆ. ರಾಮಮಂದಿರಕ್ಕೆ ಹೋಗಿದ್ದ ಕರಸೇವಕರಿದ್ದ ಬೋಗಿಗೆ ಹೊರಗಿನಿಂದ ಲಾಕ್ ಲಾಡಿ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಆ ದುರಂತದಲ್ಲಿ ಸತ್ತವರು 59 ಜನ. ಅದಾದ ನಂತರ ಇಡೀ ಗುಜರಾತ್ ಕೋಮುಗಲಭೆಯಲ್ಲಿ ಹೊತ್ತಿ ಉರಿದು ನೂರಾರು ಜನ ಸತ್ತಿದ್ದರು. ಹೀಗಾಗಿ ಅದೇ ಟೈಟಲ್ ಇಟ್ಟುಕೊಂಡಿರೋ ಸಿನಿಮಾ ಬಗ್ಗೆ ಆಕ್ಷೇಪಗಳಿದ್ದವು.
ಟೈಟಲ್ ಮಾತ್ರ ಗೋದ್ರಾ. ಕಥೆ ಅಲ್ಲ : ಇದು ಚಿತ್ರತಂಡದವರ ವಾದ. ಗೋದ್ರಾ ಘಟನೆಗೂ ನಮ್ಮ ಚಿತ್ರದ ಕಥೆಗೂ ಸಂಬಂಧ ಇಲ್ಲ ಎಂದು ಸೆನ್ಸಾರ್ ಮಂಡಳಿ ಅಧಿಕಾರಿಗಳು ಕೇಳಲಿಲ್ಲವಂತೆ. ಚಿತ್ರದಲ್ಲಿ ಕೆಲವು ಸಮಸ್ಯೆಗಳ ಬಗ್ಗೆ ನೇರವಂತಿಕೆಯ ಸಂಭಾಷಣೆಗಳಿರುವುದೂ ಇದಕ್ಕೆ ಕಾರಣ. ಕೊನೆಗೆ ಚಿತ್ರತಂಡ ಸೆನ್ಸಾರ್ ಮಂಡಳಿ ಅಧಿಕಾರಿಗಳ ಹಠಕ್ಕೆ ಮಣಿದಿದೆ.
ಹೊಸ ಟೈಟಲ್ ಡಿಯರ್ ವಿಕ್ರಂ : ಈಗಾಗಲೇ ಈ ಟೈಟಲ್‍ನ್ನು ಸೆನ್ಸಾರ್‍ಗೆ ಸಲ್ಲಿಸಿದೆ ಚಿತ್ರತಂಡ. ಚಿತ್ರ ಥಿಯೇಟರುಗಳಲ್ಲಿ ರಿಲೀಸ್ ಆಗುವುದಿಲ್ಲ. ಒಟಿಟಿಗೇ ನೇರವಾಗಿ ಬರಲಿದೆ.