` ಎಲ್ಲ 7 ಭಾಷೆಗಳಲ್ಲಿ ಕಬ್ಜ ಡಬ್ಬಿಂಗ್ ಶುರು : ಇನ್ನೆರಡು ಭಾಷೆಗೂ ರೆಡಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಎಲ್ಲ 7 ಭಾಷೆಗಳಲ್ಲಿ ಕಬ್ಜ ಡಬ್ಬಿಂಗ್ ಶುರು : ಇನ್ನೆರಡು ಭಾಷೆಗೂ ರೆಡಿ
Kabza Movie Image

ಕಬ್ಜ. ಉಪೇಂದ್ರ ಮತ್ತು ಸುದೀಪ್ ಒಟ್ಟಿಗೇ ನಟಿಸುತ್ತಿರುವ ಬಹುಭಾಷಾ ಚಿತ್ರ. ಪ್ಯಾನ್ ಇಂಡಿಯಾ ಸಿನಿಮಾ. ಸಿನಿಮಾ ಸಿದ್ಧವಾಗುತ್ತಿರೋದು ಐದಲ್ಲ, 7 ಭಾಷೆಗಳಲ್ಲಿ. ರೆಗ್ಯುಲರ್ ಆಗಿರುವ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯ ಜೊತೆಗೆ ಒಡಿಯಾ ಹಾಗೂ ಬೆಂಗಾಳಿ ಭಾಷೆಗೂ ಸಿನಿಮಾ ಡಬ್ ಆಗುತ್ತಿದೆ. ಆರ್.ಚಂದ್ರು ನಿರ್ದೇಶನದ ಕಬ್ಜ ಚಿತ್ರದ ವಿಶೇಷಗಳು ಇಷ್ಟಕ್ಕೇ ನಿಲ್ಲೋದಿಲ್ಲ.

ಚಂದ್ರು ತಮ್ಮ ಚಿತ್ರದ ಡಬ್ಬಿಂಗ್ ನಿರ್ವಹಣೆ ಹೊಣೆಯನ್ನು ಚಿಕ್ಕಬಳ್ಳಾಪುರ ವರದರಾಜ್ ಅವರಿಗೆ ವಹಿಸಿದ್ದಾರೆ. ಮಗಧೀರ, ಆರ್.ಆರ್.ಆರ್. ಪುಷ್ಪ, ಬೀಸ್ಟ್, ಮಾಸ್ಟರ್, ವಿಕ್ರಂ.. ಹೀಗೆ ಹಲವು ಚಿತ್ರಗಳ ಡಬ್ಬಿಂಗ್‍ನ್ನು ಯಶಸ್ವಿಯಾಗಿ ನಿರ್ವಹಿಸಿರುವ ವ್ಯಕ್ತಿ ವರದರಾಜ್.

ಈ ಚಾಲೆಂಜಿಂಗ್ ರೋಲ್‍ನ್ನು ನಾನು ಎಂಜಾಯ್ ಮಾಡುತ್ತಿದ್ದೇನೆ. ಸುಮಾರು 300 ಡಬ್ಬಿಂಗ್ ಆರ್ಟಿಸ್ಟ್‍ಗಳು ಡಬ್ಬಿಂಗ್ ಮಾಡುತ್ತಿದ್ದಾರೆ. ಎಲ್ಲ ಮುಗಿಯೋಕೆ 2 ತಿಂಗಳಾದರೂ ಬೇಕು ಎಂದಿದ್ದಾರೆ ವರದರಾಜ್. ಅಂದಹಾಗೆ ಈ 7 ಭಾಷೆಗಳಲ್ಲದೆ ಚೈನೀಸ್ ಹಾಗೂ ಜಪಾನಿಸ್ ಭಾಷೆಗಳಲ್ಲೂ ಸಿನಿಮಾ ಡಬ್ ಮಾಡುತ್ತಿದ್ದಾರಂತೆ. ಅವುಗಳಿಗೆ ಡೈಲಾಗ್ ರೆಡಿಯಾಗಿದೆ. ಅದೂ ಕೂಡಾ ಶೀಘ್ರದಲ್ಲೇ ಶುರುವಾಗಲಿದೆ.

ಆರ್.ಚಂದ್ರು ನಿರ್ದೇಶನದ ಚಿತ್ರದಲ್ಲಿ ಉಪ್ಪಿ, ಕಿಚ್ಚನ ಜೊತೆಗೆ  ಶ್ರೇಯಾ ಸರಣ್, ಜಗಪತಿ ಬಾಬು, ರಾಹುಲ್ ದೇವ್, ಅನೂಪ್ ರೇವಣ್ಣ, ಕಬೀರ್ ದುರ್ಹಾನ್ ಸಿಂಗ್, ಜಯಪ್ರಕಾಶ್.. ಹೀಗೆ ಬೃಹತ್ ತಾರಾಗಣವೇ ಇದೆ.