ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರಂತೆ ಎನ್ನುವ ಸುದ್ದಿ ಹಳೆಯದೇನಲ್ಲ. ಆದರೆ ಸೆಂಚುರಿ ಸ್ಟಾರ್ ಇದಕ್ಕೆ ಯೆಸ್ ಅಥವಾ ನೋ.. ಎಂದು ಹೇಳದೆ ಕುತೂಹಲ ಉಳಿಸಿದ್ದರು. ನಿರ್ದೇಶಕ ನೆಲ್ಸನ್ ಮತ್ತು ಅವರ ತಂಡ ಶಿವಣ್ಣ ಅವರನ್ನು ಭೇಟಿ ಮಾಡಿ ಒನ್ ಲೈನ್ ಸ್ಟೋರಿ ಹೇಳಿದೆ.
ರಜನಿ ಸರ್ ಜೊತೆಗೆ ನಟಿಸುವ ಅವಕಾಶ ಸಿಗುವುದೇ ಅದೃಷ್ಟ ಮತ್ತು ಅಪರೂಪ. ಸಂತೋಷದಿಂದ ಸಿನಿಮಾದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದೇನೆ. ಚಿತ್ರದಲ್ಲಿನ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ ವಿವರವಾಗಿ ಹೇಳುತ್ತೇನೆ ಎಂದಿದ್ದಾರೆ ಶಿವಣ್ಣ.
ಇದೇ ವೇಳೆ ರಜನಿ ಸರ್ ಮತ್ತು ನಮ್ಮ ಕುಟುಂಬದ ಬಾಂಧವ್ಯ ತುಂಬಾ ಹಳೆಯದು. ನನ್ನನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದಾರೆ. ಅವರೊಂದಿಗೆ ನನಗೆ, ನಮ್ಮ ಕುಟುಂಬಕ್ಕೆ ವಿಶೇಷ ಬಾಂಧವ್ಯ ಇದೆ. ಚಿತ್ರ ಬಹುಶಃ ಆಗಸ್ಟ್‍ನಲ್ಲಿ ಸೆಟ್ಟೇರಲಿದ್ದು, ನನ್ನ ಪಾತ್ರದ ಶೂಟಿಂಗ್ ಸೆಪ್ಟೆಂಬರ್‍ನಲ್ಲಿ ನಡೆಯಬಹುದು. ಮೈಸೂರು ಅಥವಾ ಬೆಂಗಳೂರಿನಲ್ಲಿ ಚಿತ್ರೀಕರಣವಾಗಹುದು ಎಂದಿದ್ದಾರೆ ಶಿವಣ್ಣ.