` ರಿಲೀಸ್`ಗೂ ಮುನ್ನ ಲಾಭ ಮಾಡಿದ ಚಾರ್ಲಿ 777 - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ರಿಲೀಸ್`ಗೂ ಮುನ್ನ ಲಾಭ ಮಾಡಿದ ಚಾರ್ಲಿ 777
Charlie 777

777 ಚಾರ್ಲಿ ಚಿತ್ರಕ್ಕಿದು ಗುಡ್ ನ್ಯೂಸ್. ಚಿತ್ರ ಈಗಾಗಲೇ ದೇಶದ 21 ನಗರಗಳಲ್ಲಿ ನೂರಾರು ಪ್ರೀಮಿಯರ್ ಶೋ ಕಂಡಿದೆ. ಪ್ರೇಕ್ಷಕರ ಎದುರು ಬರುತ್ತಿರೋದು ನಾಳೆ. ಐದೂ ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ ಚಾರ್ಲಿ. ಅವನೇ ಶ್ರೀಮನ್ನಾರಾಯಣದ ನಂತರ ರಕ್ಷಿತ್ ಶೆಟ್ಟಿಗೆ ಇದು 2ನೇ ಪ್ಯಾನ್ ಇಂಡಿಯಾ ಸಿನಿಮಾ. ಕಿರಣ್ ರಾಜ್ ಎಂಬ ಪ್ರತಿಭಾವಂತನಿಗೆ ಡೈರೆಕ್ಟರ್ ಕ್ಯಾಪ್ ತೊಡಿಸಿ, ಸ್ವತಃ ನಿರ್ಮಾಣ ಮಾಡಿರುವ ಚಾರ್ಲಿ, ರಿಲೀಸ್ ಆಗುವುದಕ್ಕೂ ಮುನ್ನವೇ ಲಾಭದಲ್ಲಿದೆ.

ಚಿತ್ರವನ್ನು ಈಗಾಗಲೇ ಮನೇಕಾ ಗಾಂಧಿ, ರಮ್ಯಾ ಸೇರಿದಂತೆ ದೇಶದ ಹಲವು ಸೆಲಬ್ರಿಟಿಗಳು ಮೆಚ್ಚಿದ್ದಾರೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಾಳೆ ಜಗತ್ತಿನಾದ್ಯಂತ 1800ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ತೆರೆ ಕಾಣುತ್ತಿದೆ. ಇದೆಲ್ಲದಕ್ಕೂ ಮೊದಲೇ ಚಿತ್ರಕ್ಕೆ ಹಾಕಿದ್ದ ಬಂಡವಾಳ ಚಿತ್ರದ ಕನ್ನಡ ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ಗಳಲ್ಲಿಯೇ ವಾಪಸ್ ಬಂದಿದೆ.

ಚಿತ್ರದ ಕನ್ನಡ ಹಕ್ಕುಗಳನ್ನಷ್ಟೇ ಮಾರಾಟ ಮಾಡಿದ್ದೇವೆ. ಉಳಿದ ಭಾಷೆಗಳ ಹಕ್ಕುಗಳು ಈಗಲೂ ನಮ್ಮ ಬಳಿಯೇ ಇವೆ. ಥಿಯೇಟರಿಂದ ಹಾಗೂ ಉಳಿದ ಭಾಷೆಗಳಿಂದ ಬರುವುದು ಎಲ್ಲವೂ ಲಾಭವೇ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಎಷ್ಟು ಲಾಭ ಎನ್ನುವ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.

ತೆಲುಗಿನಲ್ಲಿ ರಾಣಾ ದಗ್ಗುಬಾಟಿ, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್ ರಿಲೀಸ್ ಮಾಡುತ್ತಿದೆ. ಕನ್ನಡದಲ್ಲಿ ಪ್ರತಿಷ್ಠಿತ ಕೆ.ಆರ್.ಜಿ. ಸ್ಟುಡಿಯೋಸ್ ಮೂಲಕ ಕಾರ್ತಿಕ್ ಗೌಡ ರಿಲೀಸ್ ಮಾಡುತ್ತಿದ್ದಾರೆ. ಕನ್ನಡದಲ್ಲಿ 350ಕ್ಕೂ ಹೆಚ್ಚು ಥಿಯೇಟರುಗಳಲ್ಲಿ ರಿಲೀಸ್ ಆಗುತ್ತಿದೆ.