ಯಾವಾಗ..? ಯಾವಾಗ..? ಯಾವಾಗ..?
ಸಂತೋಷ್ ಆನಂದರಾಮ್ ಹೋದಲ್ಲಿ ಬಂದಲ್ಲಿ..
ವಿಜಯ್ ಕಿರಂಗದೂರು ಕಣ್ಣಿಗೆ ಕಂಡಲ್ಲೆಲ್ಲ ಎದುರಾಗುತ್ತಿದ್ದ ಪ್ರಶ್ನೆ ಇದು. ಯುವರಾಜಕುಮಾರ್ ಸಿನಿಮಾ ಅನೌನ್ಸ್ ಮಾಡಿದ್ದೀರಿ, ಸಿನಿಮಾ ಶೂಟಿಂಗ್ ಯಾವಾಗ ಶುರು ಮಾಡ್ತೀರಿ ಅನ್ನೋ ಪ್ರಶ್ನೆಯನ್ನು ಎಲ್ಲರೂ ಕೇಳಿದ್ದವರೇ. ಪುನೀತ್ ಬಿಟ್ಟು ಹೋಗಿರುವ ಶೂನ್ಯವನ್ನ ಯುವ ತುಂಬಬಹುದು ಅನ್ನೋ ಆಸೆ ಅಭಿಮಾನಿ ದೇವರುಗಳದ್ದು. ಈಗ ಆ ಪ್ರಶ್ನೆಗೆ ಖುದ್ದು ಸಂತೋಷ್ ಆನಂದರಾಮ್ ಅವರೇ ಉತ್ತರ ಕೊಟ್ಟಿದ್ದಾರೆ.
ಅಕ್ಟೋಬರ್ನಿಂದ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಸಂತೋಷ್ ಆನಂದರಾಮ್. ಸದ್ಯಕ್ಕೆ ಅವರು ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್ ನೋಡಬೇಕು. ಪ್ರಚಾರದತ್ತ ಗಮನ ಹರಿಸಬೇಕು. ವರಮಹಾಲಕ್ಷ್ಮಿ ಹಬ್ಬಕ್ಕೆ ಆ ಸಿನಿಮಾ ರಿಲೀಸ್ ಆಗುತ್ತಿದೆ. ಅದು ಮುಗಿಯುತ್ತಿದ್ದಂತೆಯೇ ಈ ಹೊಸ ಸಿನಿಮಾ ಶುರುವಾಗಲಿದೆ.
ಅಂದಹಾಗೆ.. ಇನ್ನೊಂದು ವಿಷಯ. ಇತ್ತೀಚೆಗೆ ಯುವ ರಾಜಕುಮಾರ್ ಎಲ್ಲಿಯೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಕಾಣಿಸಿಕೊಳ್ಳುತ್ತಿಲ್ಲ. ಯುವ ರಾಜಕುಮಾರ್ ಲುಕ್ನ್ನು ಅಷ್ಟು ಜತನದಿಂದ ಕಾಪಾಡಿಕೊಂಡು ಬರುತ್ತಿದ್ದಾರೆ ಸಂತೋಷ್. ಅಕ್ಟೋಬರ್ನಲ್ಲಿ ಸಿನಿಮಾಗೆ ಮುಹೂರ್ತವಾದಾಗ ಹೇಗೂ ನೋಡಿಯೇ ನೋಡ್ತೀವಲ್ಲ. ವೇಯ್ಟ್.